ನವೋದ್ಯಮ ಪ್ರಾರಂಭಕ್ಕೆ ಅಲ್ಪಸಂಖ್ಯಾತ ಯುವಕ-ಯುವತಿಯರಿಂದ ಅರ್ಜಿಆಹ್ವಾನ

ಉಡುಪಿ, ನ.4:ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ (ಕ್ರಿಶ್ಚಿಯನ್ ಸಮುದಾಯ ಹೊರತುಪಡಿಸಿ) ಸಮುದಾಯಗಳ ಯುವಕ/ಯುವತಿಯರಿಗೆ ನವೋದ್ಯಮಗಳನ್ನು (ಸ್ಟಾರ್ಟ್ಅಪ್) ಪ್ರಾರಂಭಿ ಸಲು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಸಹಯೋಗದೊಂದಿಗೆ 2025ರ ಮಾರ್ಗಸೂಚಿಗಳೊಂದಿಗೆ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಆಸಕ್ತರು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ವೆಬ್ಸೈಟ್ - https://kmdconline.karnataka.gov.inಟಿ-ನಲ್ಲಿ ನವಂಬರ್ 13ರ ಒಳಗೆ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಪ್ರಕಟಣೆ ತಿಳಿಸಿದೆ.
Next Story




