ಅಪಘಾತ: ಸಮಾಜ ಸೇವಕ ವಿಶು ಶೆಟ್ಟಿಗೆ ಗಾಯ

ಉಡುಪಿ, ನ.5: ಕೆಎಸ್ಆರ್ಟಿಸಿ ಹಾಗೂ ಬೈಕ್ ಮಧ್ಯೆ ನಿಟ್ಟೂರು ಬಳಿ ಇಂದು ಮಧ್ಯಾಹ್ನ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಗಾಯಗೊಂಡ ಬಗ್ಗೆ ವರದಿಯಾಗಿದೆ.
ವಿಶು ಶೆಟ್ಟಿ ಬೈಕಿಗೆ ಕೆಎಸ್ಆರ್ಟಿಸಿ ಬಸ್ ಢಿಕ್ಕಿ ಹೊಡೆದಿದ್ದು, ಬಳಿಕ ಚಾಲಕ ಬಸ್ಸನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಅಪಘಾತದಿಂದ ರಸ್ತೆಗೆ ಬಿದ್ದು ವಿಶು ಶೆಟ್ಟಿ ಅವರ ಕೈಕಾಲುಗಳಿಗೆ ತೀವ್ರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
Next Story




