ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗೆ ವಿವಿಧ ಕೌಶಲ್ಯ ತರಬೇತಿ

ಉಡುಪಿ, ನ.5: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೊಪಾಯ ಇಲಾಖೆ ಹಾಗೂ ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆ ಇವರ ಸಂಯುಕ್ರಾಶ್ರಯದಲ್ಲಿ ಉಡುಪಿ ಜಿಲ್ಲಾ ಕಾರಾಗೃಹದಲ್ಲಿರುವ 32 ಬಂದಿ (ಕೈದಿ)ಗಳಿಗೆ ಗೆರಟೆ ಕರಕುಶಲ ವಸ್ತುಗಳ ಮತ್ತು ಅಲಂಕಾರಿಕ ಮೌಲ್ಯವರ್ಧಿತ ಉತ್ಪನ್ನಗಳ ಕೌಶಲ್ಯ ಕುರಿತು ಒಂದು ವಾರದ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಈ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಬುಧವಾರ ಜಿಲ್ಲಾ ಕಾರಾಗೃಹದಲ್ಲಿ ನಡೆದಿದ್ದು, ಮುಖ್ಯ ಅತಿಥಿ ಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಿತಿನ್ ಯಶ್ವಂತ್ ರಾವ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾರತೀಯ ವಿಕಾಸ ಟ್ರಸ್ಟ್ನ ಹಿರಿಯ ಸಹಾಯಕ ಜಗದೀಶ ಪೈ, ಟ್ರಸ್ಟ್ನ ಮನೊಹರ್ ಕಟಗೇರಿ ಹಾಗೂ ಪ್ರತಿಮಾ ಹಾಗೂ ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆಯ ಅಧೀಕ್ಷಕ ವಿಜಯಕುಮಾರ ದಿ ಚವ್ಹಾಣ, ಜೈಲರ್ಗಳಾದ ಡಿ.ಆರ್.ಕೊಣಿ ಹಾಗೂ ಎಸ್.ಎ.ಶಿರೋಳ, ಸಹಾಯಕ ಜೈಲರ್ ಸಿದ್ದಪ್ಪ ಟಿ ಕೋಣೆ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.




