Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಕಂಡ್ಲೂರು: ಅಪಘಾತ ತಡೆಗೆ ಆಗ್ರಹಿಸಿ...

ಕಂಡ್ಲೂರು: ಅಪಘಾತ ತಡೆಗೆ ಆಗ್ರಹಿಸಿ ಬೃಹತ್ ಸಾರ್ವಜನಿಕ ಪ್ರತಿಭಟನೆ

ವಾರ್ತಾಭಾರತಿವಾರ್ತಾಭಾರತಿ6 Nov 2026 8:48 PM IST
share
ಕಂಡ್ಲೂರು: ಅಪಘಾತ ತಡೆಗೆ ಆಗ್ರಹಿಸಿ ಬೃಹತ್ ಸಾರ್ವಜನಿಕ ಪ್ರತಿಭಟನೆ

ಕುಂದಾಪುರ, ನ.6: ಕುಂದಾಪುರದಿಂದ ಹೊಸಂಗಡಿ ತೆರಳುವ ರಾಜ್ಯ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತ ತಡೆಗೆ ರಸ್ತೆ ಅಗಲೀಕರಣ ಮಾಡಬೇಕು ಮತ್ತು ಟಿಪ್ಪರ್ ಹಾಗೂ ಘನ ವಾಹನಗಳ ಅತಿವೇಗದ ಚಾಲನೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಕಂಡ್ಲೂರು ಜಾಮಿಯಾ ಮಸೀದಿ ಆಡಳಿತ ಸಮಿತಿ, ಸಮಾನ ಮನಸ್ಕರು, ಸಾರ್ವಜನಿಕರು ಹಾಗೂ ಪ್ರಗತಿಪರ ಹೋರಾಟಗಾರರ ಸಹಭಾಗಿತ್ವದಲ್ಲಿ ಶುಕ್ರವಾರ ಕಂಡ್ಲೂರು ಗ್ರಾ.ಪಂ. ವಠಾರದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿತ್ತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಗುಡಿಬೆಟ್ಟು, ಇದೊಂದು ನೋವಿನ ಬೇಡಿಕೆ. ಬದುಕಿ ಬಾಳಬೇಕಾದ ಯುವಕನೋರ್ವ ಬೇರೊಬ್ಬರ ತಪ್ಪಿನ ಕಾರಣದಿಂದ ಮೃತ ಪಡುವಂತಾಗಿದೆ. ವಾಹನ ದಟ್ಟಣೆಯಿರುವ ಕುಂದಾಪುರ ಮೂರುಕೈನಿಂದ ದೂಪದಕಟ್ಟೆ ತನಕ ವಾಹನ ಸವಾರರು, ಪಾದಾಚಾರಿಗಳು ಜೀವಕೈಯಲ್ಲಿ ಹಿಡಿದು ಚಲಿಸುವಂತಾಗಿದೆ ಎಂದು ಹೇಳಿದರು.

ಕಳೆದ ಕೆಲವು ದಶಕಗಳಿಂದ ಈ ರಸ್ತೆ ಅಭಿವೃದ್ಧಿಗೆ ಹಲವು ಹೋರಾಟಗಳು ನಡೆದಿವೆ. ಲೋಕೋಪಯೋಗಿ ಇಲಾಖೆ ನಿಷ್ಕ್ರೀಯತೆ ಇದರಲ್ಲಿ ಎದ್ದು ಕಾಣುತ್ತಿದೆ. ಜನಪ್ರತಿನಿಧಿಗಳಾದವರ ಇಚ್ಚಾಶಕ್ತಿ ಕೊರತೆಯೂ ಇದೆ. ಮೊದಲು ರಾಷ್ಟ್ರೀಯ ಹೆದ್ದಾರಿಯಾಗಿ ರಸ್ತೆ ಅಗಲೀಕರಣ ಆಗಬೇಕು ಎಂದವರು ಆಗ್ರಹಿಸಿದರು.

ದಸಂಸ ಭೀಮಘರ್ಜನೆಯ ರಾಜ್ಯ ಸಂಚಾಲಕ ಉದಯಕುಮಾರ್ ತಲ್ಲೂರು ಮಾತನಾಡಿ, ಕುಂದಾಪುರ-ತೀರ್ಥಹಳ್ಳಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಮಾಡಬೇಕೆಂಬ ಹಕ್ಕೊತ್ತಾಯ ನಮ್ಮದಾಗಿದ್ದು ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಿಂದ ಹೋರಾಟಗಳು ಆರಂಭವಾಗಬೇಕು. ಜಿಲ್ಲೆಯ ಸಂಸದರು, ಸಂಬಂಧಪಟ್ಟ ಶಾಸಕರಲ್ಲಿ ಮನವಿ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಪ್ರತಿಭಟನೆ ಹಕ್ಕು ಎಲ್ಲರಿಗೂ ಇದ್ದು ಅದಕ್ಕೆ ಕಡಿವಾಣ ಹಾಕುವ ವ್ಯವಸ್ಥೆ ಆಡಳಿತ ಮಾಡಬಾರದು. ರಸ್ತೆ ಸಮಸ್ಯೆ ಬಗ್ಗೆ ಸಂಬಂಧಿತ ಎಲ್ಲಾ ಇಲಾಖೆ ಇಚ್ಚಾಶಕ್ತಿ ಕಾರ್ಯ ಮಾಡಬೇಕು ಎಂದರು.

ಕಂಡ್ಲೂರು ಜಾಮೀಯಾ ಮಸೀದಿ ಜೊತೆ ಕಾರ್ಯದರ್ಶಿ ಲಿಯಾಕತ್ ಬೆಟ್ಟೆ ಮಾತನಾಡಿ, ನಿತ್ಯ ಸಾವು-ನೋವುಗಳು ಸಂಭವಿಸುತ್ತಿದ್ದರೂ ಸಂಬಂಧಿತ ಇಲಾಖೆ ಅಗತ್ಯ ಕ್ರಮವಹಿಸುತ್ತಿಲ್ಲ. ಇದು ಟಿಪ್ಪರ್ ಚಾಲಕರು, ವಾಹನಗಳ ವಿರುದ್ಧದ ಹೋರಾಟವಲ್ಲ, ಬದಲಾಗಿ ಸಾರ್ವಜನಿಕರ ಸುರಕ್ಷತೆಗಾಗಿ ನಡೆಯುತ್ತಿರುವ ಹೋರಾಟ. ಅಪಘಾತಗಳು ಸಂಭವಿಸಿ ಒಂದೆರಡು ವಾರ ಎಲ್ಲಾ ಕಾನೂನು ಜಾರಿಗೊಳಿಸುತ್ತಾರಾದರೂ ಬಳಿಕ ಮತ್ತೆ ಎಂದಿನಂತೆ ಅವ್ಯವಸ್ಥೆ ಮುಂದುವರೆಯುತ್ತದೆ ಎಂದವರು ಅಸಮಾಧಾನ ಹೊರಹಾಕಿದರು.

ವಕೀಲರಾದ ಶಶಿಧರ್ ಹೆಗ್ಡೆ ಮಾತನಾಡಿ, ಈ ಬೇಡಿಕೆಯು ಮನುಷ್ಯ ಜೀವದ ಪ್ರಶ್ನೆಯಾಗಿದೆ. ಅತೀ ಹೆಚ್ಚು ವಾಹನಗಳು ತಿರುಗುವ ರಸ್ತೆಯಲ್ಲಿ ಅಗತ್ಯ ಸುರಕ್ಷತಾ ಕ್ರಮವಹಿಸಬೇಕು. ಮಾನವ ಜೀವ ಅತೀ ಪ್ರಾಮುಖ್ಯ. ಅಜಾಗರುಕತೆಯ ಚಾಲನೆಯನ್ನು ನಿಲ್ಲಿಸಬೇಕು. ಯಾವುದೇ ಸಾವು- ನೋವಿಗೂ ಯಾರೊಬ್ಬರು ಕಾರಣರಾಗಬಾರದು ಎಂದು ಹೇಳಿದರು.

ಸಭೆಯಲ್ಲಿ ಹಲವು ಪ್ರಮುಖರು ಮಾತನಾಡಿ ಹಕ್ಕೋತ್ತಾಯ ಮಂಡಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಟಿಯು ಕರ್ನಾಟಕ ರಾಜ್ಯ ಕಮಿಟಿ ಸದಸ್ಯ ಹನೀಫ್ ಮುಳೂರು, ನಮ್ಮ ನಾಡು ಒಕ್ಕೂಟ ಕೇಂದ್ರ ಸಮಿತಿ ಉಪಾಧ್ಯಕ್ಷ ಹುಸೇನ್ ಹೈಕಾಡಿ, ಕಂಡ್ಲೂರು ಜಾಮೀಯಾ ಮಸೀದಿ ಅಧ್ಯಕ್ಷ ಸುಹೈಲ್ ಮುಖ್ತೆಸರ್, ಉಪಾಧ್ಯಕ್ಷ ರಿಜ್ವಾನ್ ಮೌಲಾನಾ, ಖತೀಬರಾದ ಇಲಿಯಾಝ್ ಮೌಲಾನಾ, ಕಾರ್ಯದರ್ಶಿ ಫಝಾಲ್ ಮೌಲಾನಾ, ಖಜಾಂಚಿ ಜಿ. ಮೊಹಮ್ಮದ್ ಸಾಹೇಬ್, ಸದಸ್ಯ ಖಲೀಫ್ ಮುನಾಫ್, ಕಂಡ್ಲೂರು ಝಿಯಾ ಎಜ್ಯುಕೇಶನ್ ಟ್ರಸ್ಟ್‌ನ ಸಂಸ್ಥಾಪಕ ಮೌಲಾನಾ ಉಬೈದುಲ್ಲಾ ಅಬೂಬಕರ್ ನದ್ವಿ, ರೈತ ಮುಖಂಡ ಹಾಗೂ ವಕೀಲ ವಿಕಾಸ್ ಹೆಗ್ಡೆ, ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿ ಬಳಗ ಬಳ್ಕೂರಿನ ತಿಲಕ್‌ರಾಜ್, ಉಡುಪಿ ಮುಸ್ಲಿಂ ಒಕ್ಕೂಟದ ಜೊತೆ ಕಾರ್ಯದರ್ಶಿ ಎಸ್. ಮುನೀರ್, ಜಿ.ಪಂ. ಮಾಜಿ ಸದಸ್ಯ ದೇವಾನಂದ ಶೆಟ್ಟಿ, ಸಾಮಾಜಿಕ ಹೋರಾಟಗಾರ ಮಿಥುನ್ ಶೆಟ್ಟಿ, ಎಸ್‌ಡಿಪಿಐ ಜಿಲ್ಲಾ ಜೊತೆ ಕಾರ್ಯದರ್ಶಿ ನಸೀಮಾ, ಡಬ್ಲ್ಯೂ.ಐ.ಎಂ ಜಿಲ್ಲಾಧ್ಯಕ್ಷ ನೌಶಿನ್ ಹಸ್ರತ್, ದಸಂಸ ಮುಖಂಡ ರಾಘು ಶಿರೂರು, ಪ್ರಮುಖರಾದ ಟಿ.ಕೆ. ಶಫಿ ಸಾಹೇಬ್, ವಿಜಯ ಪುತ್ರನ್, ಜ್ಯೋತಿ ಪುತ್ರನ್, ಹಿದಾಯತ್ ಕಂಡ್ಲೂರು, ಕಂಡ್ಲೂರು ಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಚಂದ್ರಶೇಖರ್ ಜೋಗಿ, ಲಾರಿ ಮಾಲೀಕರ ಸಂಘದ ದಿವಾಕರ ಶೆಟ್ಟಿ, ಸೈಂಟ್ ಅಂತೋನಿ ಚರ್ಚ್‌ನ ಚಾಲ್ಸ್ ನೊರಾನ್ ಫಾದರ್ ಮೊದಲಾದವರು ಭಾಗವಹಿಸಿದ್ದರು.

ಲಿಯಾಕತ್ ಬೆಟ್ಟೆ ಸ್ವಾಗತಿಸಿದರು. ಮುಕ್ತಾರ್ ಕಂಡ್ಲೂರು ನಿರೂಪಿಸಿ, ಸುಹೈಲ್ ಮುಖ್ತೆಸಾರ್ ವಂದಿಸಿದರು.

ಪ್ರಮುಖ ಬೇಡಿಕೆಗಳು

*ಕುಂದಾಪುರದಿಂದ ಹೊಸಂಗಡಿಯವರೆಗೆ ರಸ್ತೆ ಅಗಲೀಕರಣ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು.

*ಟಿಪ್ಪರ್ ಹಾಗೂ ಘನ ವಾಹನಗಳ ಅತಿವೇಗದ ಚಾಲನೆಗೆ ಕಡಿವಾಣ ಹಾಕಬೇಕು.

*ಶಾಲಾ ಮಕ್ಕಳು, ಪಾದಚಾರಿಗಳು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು.

*ಅಪಘಾತ ತಡೆಗೆ ಅಗತ್ಯ ರಸ್ತೆ ಸುರಕ್ಷತಾ ಕ್ರಮ ಜಾರಿಗೊಳಿಸಬೇಕು. ಅಗತ್ಯ ಕಡೆ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು.

*ಶಾಲೆ ಆರಂಭವಾಗುವ ಮತ್ತು ಮುಕ್ತಾಯಗೊಳ್ಳುವ ಸಮಯದಲ್ಲಿ ಟಿಪ್ಪರ್ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಬೇಕು.










share
ವಾರ್ತಾಭಾರತಿ
ವಾರ್ತಾಭಾರತಿ
Next Story
X