ಯುವಕ ನಾಪತ್ತೆ

ಉಡುಪಿ, ನ.7: ಬೈಂದೂರು ದೊಂಬೆ ಪಡುವರಿ ಗ್ರಾಮದ ನಿವಾಸಿ ನವೀನ್ ಜಂಬವಾಳಿ (38) ಎಂಬವರು ಅ.17ರಂದು ತನ್ನ ಮನೆಯಾದ ಅಂಕೋಲಾಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋದವರು, ಅಲ್ಲಿಗೂ ಹೋಗದೆ, ವಾಪಾಸು ಮನೆಗೂ ಬಾರದೇ ನಾಪತ್ತೆಯಾಗಿದ್ದಾರೆ.
5 ಅಡಿ 6 ಇಂಚು ಎತ್ತರ, ಸಾಧಾರಣ ಶರೀರ, ಕೋಲುಮುಖ, ಎಣ್ಣೆ ಮೈಬಣ್ಣ ಹೊಂದಿದ್ದು ಕೊಂಕಣಿ ಹಾಗೂ ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೊಲೀಸ್ ಠಾಣೆ: (08254) -251033, 9480805459, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ: (08254) 251031, 9480805434, ಕಂಟ್ರೋಲ್ ರೂಂ: 100 (0820) 2526444 ಅನ್ನು ಸಂಪರ್ಕಿಸುವಂತೆ ಬೈಂದೂರು ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story




