ಸೈಕಲ್ನಿಂದ ಬಿದ್ದು ವ್ಯಕ್ತಿ ಮೃತ್ಯು

ಪಡುಬಿದ್ರೆ, ನ.7: ಸೈಕಲ್ನಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶನಿವಾರ ಸಂಜೆ ಪಣಿಯೂರು ಪೇಟೆಯ ಬಳಿ ನಡೆದಿದೆ.
ಮೃತರನ್ನು ಬೆಳಪು ದರ್ಖಾಸು ನಿವಾಸಿ ವಿಶ್ವನಾಥ(47) ಎಂದು ಗುರುತಿಸಲಾಗಿದೆ. ಇವರು ಸೈಕಲ್ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಸೈಕಲ್ನಿಂದ ಬಿದ್ದರೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ಉಚ್ಚಿಲದ ಸಮಾಜ ಸೇವಕರಾದ ಜಲಾಲುದ್ದೀನ್ ಮತ್ತು ಹಮೀದ್ ಆಸ್ಪತ್ರೆಗೆ ಸಾಗಿಸಿದರು. ಆದರೆ ಗಂಭೀರವಾಗಿ ಗಾಯಗೊಂಡ ಅವರು ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




