ಲೇಖಕಿಯರನ್ನು ಮೊದಲು ಸ್ಥಳೀಯವಾಗಿ ಗುರುತಿಸುವುದು ಮುಖ್ಯ: ಡಾ.ರೇಖಾ ಬನ್ನಾಡಿ

ಕುಂದಾಪುರ, ನ.8: ಕನ್ನಡದ ಲೇಖಕಿಯರು ಬೆಳೆಯಬೇಕಾದರೆ ಮೊದಲು ಅವರನ್ನು ಸ್ಥಳೀಯ ಮಟ್ಟದಲ್ಲಿ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಅವರ ಕೃತಿಗಳ ಕುರಿತು ಅವಲೋಕನ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಲೇಖಕಿ ಡಾ.ರೇಖಾ ಬನ್ನಾಡಿ ಹೇಳಿದ್ದಾರೆ.
ರೋಟರಿ ಮಿಡ್ ಟೌನ್ ಕುಂದಾಪುರ ಹಾಗೂ ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ’ ವತಿಯಿಂದ ಹಮ್ಮಿಕೊಳ್ಳಲಾದ ‘ಕನ್ನಡ ರಾಜ್ಯೋತ್ಸವ -26’ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ರೋಟರಿ ಕ್ಲಬ್ನ ಸಚಿನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷೆ ಡಾ.ಪಾರ್ವತಿ ಜಿ.ಐತಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಮತಿ ಶೆಣೈ ಮತ್ತು ವಿಮಲಾ ನಾವಡ, ‘ಸುಮನಾ ಹೇರ್ಳೆ ಸಾಹಿತ್ಯಾವಲೋಕನ’ ನಡೆಸಿಕೊಟ್ಟರು. ಕಥೆಗಾರ್ತಿ ಶಾಂತಾ ಸುರೇಶ್ ಹೆಬ್ಬಾರ್ ಮತ್ತು ಕವಯಿತ್ರಿ ಸುಶೀಲಾ ಎಲ್.ಶೆಟ್ಟಿ ಅವರಿಗೆ ’ಸುರಗಂಗಾ ಕನ್ನಡ ರಾಜ್ಯೋತ್ಸವ ಪುರಸ್ಕಾರ’ ನೀಡಿ ಗೌರವಿಸಲಾಯಿತು.
ಸನ್ಮಾನ ಪತ್ರಗಳನ್ನು ಶ್ರೀದೇವಿ ಹಂದೆ ಮತ್ತು ಲೇಖಾ ಹೊಳ್ಳ ವಾಚಿಸಿದರು. ಮೂಕಾಂಬಿಕಾ ಉಡುಪ ಮತ್ತು ನಿಮಿತಾ ಶೆಟ್ಟಿ ಭಾವಗೀತೆಗಳನ್ನು ಹಾಡಿದರು. ಕನ್ನಡ ಕೈಬರಹ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸುಮಲತಾ ಸುರೇಶ್ ಸ್ವಾಗತಿಸಿದರು. ಜೆಸ್ಸಿ ಎಲಿಜಬೆತ್ ವಂದಿಸಿದರು. ಸುಜಾತಾ ರಮೇಶ ರಾವ್ ಕಾರ್ಯಕ್ರಮ ನಿರೂಪಿಸಿದರು. ಸುಪ್ರೀತಾ ಪುರಾಣಿಕ್-ಮಹಾಲಕ್ಷ್ಮಿ ಸೋಮಯಾಜಿ ಮತ್ತು ಬಳಗದವರಿಂದ ಕರ್ನಾಟಕ ವೈಭವ’ ಎಂಬ ಸಂಗೀತ- ನೃತ್ಯ ರೂಪಕದ ಪ್ರಸ್ತುತಿ ಎಲ್ಲರ ಗಮನ ಸೆಳೆಯಿತು.






