ಶೈಕ್ಷಣಿಕ ದತ್ತಿನಿಧಿ/ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಉಡುಪಿ, ನ.8: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿಶ್ವಕರ್ಮ ಸಮಾಜದ ಅರ್ಹ ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಂದ ಶೈಕ್ಷಣಿಕ ದತ್ತಿನಿಧಿ/ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕರೆಯಲಾಗಿದೆ.
2025-26ನೇ ಸಾಲಿನ ಎಸೆಸೆಲ್ಸಿ, ಪಿಯುಸಿ ಅಂತಿಮ ಪರೀಕ್ಷೆಗಳಲ್ಲಿ ಶೇ.95ಕ್ಕಿಂತ ಅಧಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಕನಿಷ್ಠ ಶೇ.70 ಅಂಕ, ಪದವಿ ಪರೀಕ್ಷೆಯಲ್ಲಿ ಬಿ.ಎ., ಬಿಕಾಂ ಇತ್ಯಾದಿ ಶೇ.80ಕ್ಕಿಂತ ಹೆಚ್ಚು, ಇಂಜಿನಿಯರಿಂಗ್ (ಬಿಇ, ಬಿಟೆಕ್ ಆರ್ಕಿಟೆಕ್ಟ್ ಇತ್ಯಾದಿ), ಡಿಪ್ಲೋಮಾ (ಸಿವಿಲ್, ಮೆಕ್ಯಾನಿಕಲ್ ಇತ್ಯಾದಿ), ಎಂಬಿಬಿಎಸ್, ಬಿಎಎಂಎಸ್ ಮುಂತಾದ ವೈದ್ಯಕೀಯ ಶಿಕ್ಷಣ, ಸ್ನಾತಕೋತ್ತರ ಪದವಿ(ಎಂಎ, ಎಂಕಾಂ,ಎಂಎಸ್ಸಿ ಇತ್ಯಾದಿ),ವೃತ್ತಿ ಶಿಕ್ಷಣಗಳಾದ ಬಿಎಡ್, ಡಿಎಡ್, ಬಿಸಿಎ,ಬಿಎಸ್ ಡಬ್ಲ್ಯೂ, ಎಲ್ಎಲ್ಬಿ, ಐಟಿಐ, ಬಿಎಪ್ಎ(ಲಲಿತಕಲೆ) ಹಾಗೂ ವೈದಿಕ ಶಿಕ್ಷಣ ಪರೀಕ್ಷೆಗಳಲ್ಲಿ ಶೇ.75ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಯ ಅಂಕಪಟ್ಟಿಯ ಪ್ರತಿಯೊಂದಿಗೆ ಹಾಗೂ ಗುರು-ಶಿಷ್ಯ ಪರಂಪರೆಯಲ್ಲಿ ಪಂಚ ಕಸುಬುಗಳ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ನಿಗದಿತ ನಮೂನೆಯ ಅರ್ಜಿಯಲ್ಲಿ ಬರೆದು ಸ್ಥಳೀಯ ವಿಶ್ವಕರ್ಮ ಸಮಾಜದ ಸಂಘ ಸಂಸ್ಥೆಗಳ ಶಿಫಾರಸು ಪತ್ರ ದೊಂದಿಗೆ ನ.21ರೊಳಗೆ ಅಲೆವೂರು ಯೋಗೀಶ ಆಚಾರ್ಯ, ವಿಶ್ವಕರ್ಮ ಒಕ್ಕೂಟ, ನ್ಯೂ ಮಂಗಳಾ ಜುವೆಲ್ಲರ್ಸ್, ವಿ.ಕೆ.ಪ್ಯಾರಡೈಸ್ ಸಂಕೀರ್ಣ, ಉಡುಪಿ, 576101 ಉಡುಪಿ ಜಿಲ್ಲೆ ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9448348200 ಕೆ.ಮುರಳೀಧರ ಇವರನ್ನು ಸಂಪರ್ಕ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.




