ದೇಶದಲ್ಲಿ ಮುಸ್ಲಿಮರು ಅಸ್ಮಿತೆ ಕಾರಣಕ್ಕೆ ಕೊಲೆಗೀಡಾದರು: ನದೀಮ್ ಖಾನ್
ಭರವಸೆ - ಪ್ರತಿರೋಧದ ಧ್ವನಿ ‘ಸಾಲಿಡಾರಿಟಿ ಸಮಾವೇಶ’

ಉಡುಪಿ, ನ.8: ನೂರಕ್ಕು ಅಧಿಕ ಮುಸ್ಲಿಮರು ತಮ್ಮ ಅಸ್ಮಿತೆಯ ಕಾರಣಕ್ಕೆ ಈ ದೇಶದಲ್ಲಿ ಹತ್ಯೆಗೀಡಾಗಿದ್ದಾರೆ. ಮೋದಿ ನೇತೃತ್ವದಲ್ಲಿ ಮೊದಲ ಸರಕಾರ ಅಸ್ವಿತ್ವ ಬಂದ ಸಂದರ್ಭದಲ್ಲಿ ಮುಸ್ಲಿಮರ ಅಸ್ಮಿತೆಯನ್ನು ಗುರಿಯಾಗಿಸಿ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಲಾಗುತ್ತಿತ್ತು. 2019 ನಂತರ ಎರಡನೇ ಹಂತ ಆರಂಭಗೊಂಡಿತು. ಎರಡನೇ ಹಂತದಲ್ಲಿ ಸಾಮೂಹಿವಾಗಿ ಶಿಕ್ಷಿಸುವ ಪ್ರವೃತ್ತಿ ಮುಂದುವರಿಯಿತು ಎಂದು ದೆಹಲಿಯ ಮಾನವ ಹಕ್ಕು ಹೋರಾಟಗಾರ ಹಾಗೂ ಎಪಿಸಿಆರ್ ರಾಷ್ಟ್ರೀಯ ಕಾರ್ಯದರ್ಶಿ ನದೀಮ್ ಖಾನ್ ಹೇಳಿದ್ದಾರೆ.
ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ವತಿಯಿಂದ ಶನಿವಾರ ಉಡುಪಿಯ ಪುರಭವನದಲ್ಲಿ ಆಯೋಜಿಸಲಾದ ಭರವಸೆ ಮತ್ತು ಪ್ರತಿರೋಧದ ಧ್ವನಿ-ಸಾಲಿಡಾರಿಟಿ ಸಮಾವೇಶದಲ್ಲಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಯಾಗಿ ಜಮಾಅತೆ ಇಸ್ಲಾಮಿ ಹಿಂದ್‌ನ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ರಾಜ್ಯಾಧ್ಯಕ್ಷ ಡಾ.ನಸೀಮ್ ಅಹ್ಮದ್ ಮಾತನಾಡಿದರು. ಸಮಾವೇಶದಲ್ಲಿ ಅಕ್ರಮ ಎಸ್‌ಐಆರ್ ರದ್ದುಗೊಳಿಸಿ ಗ್ಯಾನೇಶ್ ಕುಮಾರ್ ಅವರನ್ನು ಬಂಧಿಸಲು ಕೋರಿ ಬ್ಯಾನರ್ ಪ್ರದರ್ಶನ ಮಾಡಲಾಯಿತು.
ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಉಡುಪಿ ಜಿಲ್ಲಾಧ್ಯಕ್ಷ ಅಫ್ವಾನ್ ಬಿ.ಹೂಡೆ, ಪ್ರಮುಖರಾದ ರಫೀಕ್ ಬೀದರ್, ಕುಲ್ಸುಮ್ ಅಬುಬಕ್ಕರ್, ನಿಸಾರ್ ಉಡುಪಿ, ಮೌಲನ ಆದಮ್ ಸಾಹೇಬ್, ನುಝ್ಲಾ ಫಾತಿಮಾ, ರಯ್ಯಾನ್ ಉಡುಪಿ, ಎಚ್‌ಆರ್‌ಎಸ್‌ನ ಅಮೀರ್ ಕುದ್ರೋಳಿ ಮೊದಲಾದವವರು ಉಪಸ್ಥಿತರಿದ್ದರು.
ಸಭೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲ, ಸಹಬಾಳ್ವೆಯ ಸಂಚಾಲಕ ಪ್ರೊ.ಫಣಿರಾಜ್, ದಸಂಸ ಮುಖಂಡರಾದ ಸುಂದರ್ ಮಾಸ್ತರ್, ಶ್ಯಾಮರಾಜ್ ಬಿರ್ತಿ, ಸಿಐಟಿಯು ಮುಖಂಡರಾದ ಕವಿರಾಜ್, ಶಶಿಧರ್ ಗೊಲ್ಲ, ಉಡುಪಿ ಕೆಥೋಲಿಕ್ ಸಭಾ ಅಧ್ಯಕ್ಷ ಮೆಲ್ವಿನ್ ಅರ್ಹಾನ, ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷ ಚಾರ್ಲ್ಸ್ ಆ್ಯಂಬ್ಲರ್, ಪ್ರಮುಖರಾದ ರಾಮಕೃಷ್ಣ ಹೆರ್ಳೆ, ಉದ್ಯಾವರ ನಾಗೇಶ್ ಕುಮಾರ್, ಪ್ರಮೀಳಾ ಜತ್ತನ್ನ, ಶಭೀ ಖಾಝಿ, ಇದ್ರಿಸ್ ಹೂಡೆ, ದಸ್ತಗಿರ್ ಕಂಡ್ಲೂರ್, ಇರ್ಷಾದ್ ನೇಜಾರು, ಮುಸ್ತಾಕ್ ಬೆಳ್ವೆ, ಇಸ್ಮಾಯಿಲ್ ಕಟಪಾಡಿ, ಡಾ.ಸುನೀನಾ, ನುಝ್ಲಾ ಫಾತಿಮಾ ಹಾಜರಿದ್ದರು.
ನಿಹಾಲ್ ಕಿದಿಯೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಸೀಬ್ ತರಫದರ್ ಹಾಗೂ ಶಾರೂಕ್ ತೀರ್ಥಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಯಾಸೀನ್ ಕೋಡಿಬೆಂಗ್ರೆ ವಂದಿಸಿದರು. ಬಳಿಕ ದೆಹಲಿಯ ಹಾಡುಗಾರ ಡಾ.ಹೈದರ್ ಸೈಫಿ ಪ್ರತಿರೋಧದ ಹಾಡುಗಳ ಗಾಯನ ನಡೆಸಿಕೊಟ್ಟರು.






