ದೀಪಾವಳಿ ಆಚರಣೆ: ತುಳು ಸಂಸ್ಕೃತಿ ಬೆಳಗಿದ ಆಕಾಶದೀಪ

ಉಡುಪಿ, ನ.9: ಪರ್ಕಳದ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ವಾಲಿಬಾಲ್ ಫ್ರೆಂಡ್ಸ್ ತಂಡವು ಈ ಬಾರಿ ತುಳುನಾಡಿನ ವೈಭವ ಸ್ಮರಿಸುವ ಆಕಾಶದೀಪದೊಂದಿಗೆ ದೀಪಾವಳಿ ಆಚರಿಸಿದೆ.
ಇತ್ತೀಚೆಗಷ್ಟೇ ರಾಜ್ಯ ಸರ್ಕಾರವು ತುಳು ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಿದೆ. ಹೀಗಾಗಿ ತುಳುನಾಡಿನ ವಿಶಿಷ್ಟತೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಜನಜೀವನ ಬಿಂಬಿಸುವ ಬೃಹತ್ ಆಕಾಶದೀಪ ಸಿದ್ಧಪಡಿಸಲಾಗಿದೆ. ಸಹಕಾರ ಭಾರತಿ ಹಾಗೂ ಪರ್ಕಳದ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ಮಹಿಷಮರ್ಧಿನಿ ದೇವಸ್ಥಾನದ ಸಹಕಾರದಲ್ಲಿ ದೇಗುಲದ ಮುಂಭಾಗದ ರಸ್ತೆಯಲ್ಲಿ ಬೃಹತ್ ಆಕಾಶದೀಪ ಅಳವಡಿಸಲಾಗಿದೆ.
13 ಫೀಟ್ ಎತ್ತರ, 6 ಫೀಟ್ ಅಗಲದ ಅಷ್ಟಾಕೃತಿಯ ಆಕಾಶದೀಪದಲ್ಲಿ ತುಳುನಾಡಿನ ಆಚರಣೆಯ ಚಿತ್ರ ಅಳವಡಿಸ ಲಾಗಿದೆ. ಕೋಲ, ಯಕ್ಷಗಾನ, ಕೊರಲು ಕಟ್ಟುವುದು, ಕಂಬಳ, ಆಟಿ ಕಳಿಂಜ, ಕೋಳಿ ಅಂಕ, ಹುಲಿ ಕುಣಿತ, ಭತ್ತಕೃಷಿ, ಡೋಲು, ಗರಡಿ ನೇಮೋತ್ಸವ ಹೀಗೆ ತುಳುನಾಡಿನ ವಿವಿಧ ಜನಪದೀಯ ಸಂಸ್ಕೃತಿಯನ್ನು ಬಿಂಬಿಸಲಾಗಿದೆ.
Next Story




