ಪರ್ಕಳದಲ್ಲಿ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಣೆ

ಉಡುಪಿ, ನ.9: ಪರ್ಕಳ ಸ್ವಾಗತ ಫ್ರೆಂಡ್ಸ್ ಮತ್ತು ನಮ್ ಟೀಮ್ ಮಣಿಪಾಲದ ಜಂಟಿ ಆಶ್ರಯದಲ್ಲಿ ಬೃಹತ್ ಗಾತ್ರದ ಗಜೇಂದ್ರ ದೀಪವನ್ನು ಪ್ರಜ್ವಲಿಸಿ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಿಸಲಾಯಿತು.
ಉದ್ಯಮಿ, ಕಾಂಗ್ರೆಸ್ ಮುಖಂಡ ಪ್ರಸಾದರಾಜ್ ಕಾಂಚನ್ ಶುಭ ಹಾರೈಸಿದ್ದರು. ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಫ್ರಾಂಕಿ ಡಿಸೋಜ ಮಾತನಾಡಿದರು. ಈ ಸಂದರ್ಭದಲ್ಲಿ ಸ್ವಾಗತ ಫ್ರೆಂಡ್ಸ್ನ ಮುಖ್ಯಸ್ಥರಾದ ಪರ್ಕಳ ಮೋಹನ್ದಾಸ್ ನಾಯಕ್, ಜಯ ಶೆಟ್ಟಿ ಬನ್ನಂಜೆ, ಜಾನ್ ಡಿಸೋಜ ಕೊಳಲಗಿರಿ, ದೇವೇಂದ್ರ ನಾಯ್ಕ್, ಉಪೇಂದ್ರ ನಾಯ್ಕ್, ಪಿಕೆಸಿ ಕರಾಟೆ ತಂಡದ ಶಿಕ್ಷಕಿ ಪ್ರವೀಣ ಸುವರ್ಣ, ಮತ್ತು ಕರಾಟೆ ತಂಡದ ಸದಸ್ಯರಾದ ಸ್ವಪ್ನ ಶಂಕರ್ ನಾಯಕ್, ದೇವಿಪ್ರಸಾದ್ ಆಚಾರ್ಯ, ಸದಾನಂದ ಪೂಜಾರಿ, ಸಚ್ಚಿದಾನಂದ ಕುಲಾಲ್, ಸುಮಿತ್ ಎಸ್.ಶೆಟ್ಟಿ, ರಾಘವೇಂದ್ರ ಆಚಾರ್ಯ, ಸುರೇಂದ್ರ ನಾಯಕ್, ಕಾರ್ಯಕ್ರಮ ಸಂಘಟಕ ಗಣೇಶ್ರಾಜ್ ಸರಳೆಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
Next Story




