ಪರಸ್ಪರ ಹೊಡೆದಾಟ: ಮೂವರು ವಶಕ್ಕೆ

ಬ್ರಹ್ಮಾವರ, ನ.11: ಹಣಕಾಸಿನ ವಿಚಾರದಲ್ಲಿ ಸಾರ್ವಜನಿಕವಾಗಿ ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟುಮಾಡುತ್ತಿದ್ದ ಮೂವರನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚೇರ್ಕಾಡಿ ಗ್ರಾಮದ ಪೇತ್ರಿ ಬಾರ್ ಸಮೀಪ ನ.9ರಂದು ರಾತ್ರಿ ವೇಳೆ ಸುನೀಲ್ ನಾಯ್ಕ್, ರೋಶನ್ ಡಿಸೋಜ ಮತ್ತು ರೂಪೇಶ್ ಶೆಟ್ಟಿ ಎಂಬವರು ಹಣಕಾಸಿನ ವಿಚಾರದಲ್ಲಿ ಪರಸ್ಪರ ಮಾತುಕತೆ ನಡೆಸಿ, ನಂತರ ಕೈ ಕೈ ಮಿಲಾಯಿಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆದಾಡಿ ಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story




