ಬೈಂದೂರಿನ ಯುವಕ ಬೆಂಗಳೂರಿನಲ್ಲಿ ಅನುಮಾನಾಸ್ಪದ ಮೃತ್ಯು

ಬೈಂದೂರು, ನ.11: ಬೆಂಗಳೂರಿನ ಹೊಟೇಲಿನಲ್ಲಿ ಕೆಲಸ ಮಾಡಿಕೊಂಡಿದ್ದ ಬೈಂದೂರಿನ ಯುವಕರ್ನೋವ ಅನುಮಾನಸ್ಪದವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಬಿಜೂರು ಗ್ರಾಮದ ಚಂದ್ರ(37) ಎಂಬವರು ಬೆಂಗಳೂರಿನ ನಾಗೊಂಡನ ಹಳ್ಲಿ ವೈಟ್ ಪೀಲ್ಡ್ನಲ್ಲಿರುವ ಹರೀಶ ದೇವಾಡಿಗ ಎಂಬವರ ಹೋಟೇಲ್ ನಲ್ಲಿ ಕಳೆದ 10 ವರ್ಷಗಳಿಂದ ಕೆಲಸಮಾಡಿಕೊಂಡಿದ್ದರು. ನ.8ರಂದು ಅನಾರೋಗ್ಯದಿಂದ ಚಂದ್ರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಮೃತಪಟ್ಟಿರುವುದಾಗಿ ತಿಳಿಸಲಾಗಿತ್ತು. ನಂತರ ಮೃತರ ದೇಹವನ್ನು ಸಂಬಂಧಿ ಮೋಹನ ದೇವಾಡಿಗ ಎಂಬವರಿಗೆ ಹಂಸ್ತಾಂತರಿಸಲಾಗಿತ್ತು.
ನಂತರ ದೇಹವನ್ನು ಅಂಬುಲೆನ್ಸನಲ್ಲಿ ಬೈಂದೂರಿಗೆ ತರಲಾಗಿದೆ. ಇದೀಗ ಮನೆಯವರು ಮೃತರ ಸಾವಿನ ಬಗ್ಗೆ ಸಂಶಯವಿರುವುದಾಗಿ ದೂರು ನೀಡಿದ್ದು, ಅದರಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




