ಇಮ್ಮಾನುಯೆಲ್ ರೇಮಂಡ್ ಫೆರ್ನಾಂಡಿಸ್ ನಿಧನ

ಮಣಿಪಾಲ, ನ.13: ದಶರಥ ನಗರದ ನಿವಾಸಿ ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಇಮ್ಮಾನುಯೆಲ್ ರೇಮಂಡ್ ಫೆರ್ನಾಂಡಿಸ್(74) ಸ್ವಗೃಹದಲ್ಲಿ ನ.10ರಂದು ನಿಧನರಾದರು.
ಕರ್ನಾಟಕ ಕೈಗಾರಿಕಾ ಸಂಘ ಹಾಗೂ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದಲ್ಲಿ 28 ವರ್ಷಗಳ ಕಾಲ ಸದಸ್ಯರಾಗಿ ಸೇವೆ ನೀಡಿದ್ದಾರೆ. ಮಣಿಪಾಲ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕರ್ನಾಟಕ ಸಿಲೋಸುರ್ಸ್ ಪ್ರವೇಟ್ ಲಿಮಿಟೆಡ್ ಸಂಸ್ಥೆ ಸ್ಥಾಪಿಸಿದ್ದ ಇವರು, ರೋಟರಿ ಕ್ಲಬ್ ಸದಸ್ಯರಾಗಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ನೀಡಿದ್ದರು.
ಇವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರು, ಪಧಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ
Next Story




