ಯಕ್ಷಗಾನ ಕಲಾರಂಗದ ‘ವಿಶ್ವಪ್ರಭಾ ಸಭಾಂಗಣ’ ಉದ್ಘಾಟನೆ

ಉಡುಪಿ : ಯಕ್ಷಗಾನ ಕಲಾರಂಗ ಐ.ವೈ.ಸಿ. ಕಟ್ಟಡದ ಎರಡನೆ ಮಹಡಿಯಲ್ಲಿ ಪ್ರಭಾ ವಿ.ಶೆಣೈ ಮತ್ತು ಯು.ವಿಶ್ವನಾಥ್ ಶೆಣೈ ದಂಪತಿ ನೆರವಿನಿಂದ ನವೀಕರಣ ಗೊಂಡ ಪ್ರತಿಧ್ವನಿ ಮುಕ್ತ, ಹವಾನಿಯಂತ್ರಿತ ‘ವಿಶ್ವಪ್ರಭಾ ಸಭಾಂಗಣ’ ಶನಿವಾರ ಲೋಕಾರ್ಪಣೆಗೊಂಡಿತು.
ನೂತನ ಸಭಾಂಗಣವನ್ನು ಶೆಣೈ ದಂಪತಿ ಉದ್ಘಾಟಿಸಿದರು. ಅಧ್ಯಕ್ಷತೆ ಯನ್ನು ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ವಹಿಸಿದ್ದರು. ನಾಡೋಜ ಡಾ.ಕೆ.ಪಿ.ರಾವ್ ಶೆಣೈ ಮಾತನಾಡಿದರು.
ವೇದಿಕೆಯಲ್ಲಿ ಕಲಾರಂಗದ ಉಪಾಧ್ಯಕ್ಷ ವಿ.ಜಿ.ಶೆಟ್ಟಿ, ಕೋಶಾಧಿಕಾರಿ ಸದಾಶಿವ ರಾವ್ ಉಪಸ್ಥಿತರಿದ್ದರು. ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಆರಂಭದಲ್ಲಿ ರವಿರಾಜ್ ಎಚ್.ಪಿ. ನಿರ್ದೇಶಿಸಿದ ವಿಶ್ವನಾಥ್ ಶೆಣೈ ಅವರ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.
Next Story




