ಅರಣ್ಯ ಸಚಿವ ರಾಮಲಿಂಗಾ ರೆಡ್ಡಿಯಿಂದ ಕೋಡಿ ಕಾಂಡ್ಲಾವನ ವೀಕ್ಷಣೆ

ಕುಂದಾಪುರ : ನಗರದ ನಗರದ ಕೋಡಿ-ಕುಂದಾಪುರ ಸೇತುವೆ ಬಳಿಯ ಕೋಡಿ ಹಿನ್ನೀರು ಪ್ರದೇಶದಲ್ಲಿ ರವಿವಾರ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಕಾಂಡ್ಲಾ ವನ ವೀಕ್ಷಣೆ ನಡೆಸಿ, ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಚರ್ಚ್ ರಸ್ತೆಯ ಕೊನೆಯಲ್ಲಿನ ಕೋಡಿ-ಕುಂದಾಪುರ ಸೇತುವೆ ಬಳಿಯ ಕೋಡಿ ಹಿನ್ನೀರು ಪ್ರದೇಶಕ್ಕೆ ತೆರಳಿ, ಬೋಟ್ ಮೂಲಕ ಪರಿಸರದ ಕಾಂಡ್ಲಾ ವನ ವೀಕ್ಷಣೆ ಮಾಡಿದರು. ಈ ವೇಳೆ ಉಪಸ್ಥಿತರಿದ್ದ ಅರಣ್ಯ ಇಲಾಖೆಯ ಅಧಿಕಾರಿ ಗಳಿಂದ ಕಾಂಡ್ಲಾ ಬೆಳೆ, ಅಭಿವೃದ್ಧಿ ಹಾಗೂ ಉಪಯೋಗದ ಕುರಿತು ಮಾಹಿತಿ ಪಡೆದುಕೊಂಡರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಸುರೇಂದ್ರ ಶೆಟ್ಟಿ ಸಹನಾ, ತಿಮ್ಮ ಪೂಜಾರಿ ಮಣೂರು, ಪ್ರಕಾಶ್ ಸಿ.ಶೆಟ್ಟಿ ಯಡ್ತಾಡಿ, ಪ್ರಕಾಶ್ಚಂದ್ರ ಶೆಟ್ಟಿ ಸಿದ್ದಾಪುರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಮಲ ಕರಿಕಾಲನ್, ಗೇರು ಅಭಿವೃದ್ಧಿ ಆಡಳಿತ ನಿರ್ದೇಶಕ ಕರಿಕಾಲನ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ರುತ್ರೇನ್ ಪಿ., ರವಿಶಂಕರ್ ಸಿ., ಸಾಮಾಜಿಕ ಅರಣ್ಯ ಡಿಎಫ್ಓ ರವೀಂದ್ರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಶಿಕಾಂತ್ ಸೋಮನಾಥ ವಿಭೋದೆ, ಆಕಾಶ್ ಕದಂ ಮೂಡಬಿದ್ರೆ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಕಿರಣ್ ಬಾಬು, ವಾರೀಜಾಕ್ಷೀ ಉಡುಪಿ, ಸಂದೇಶ ಶಂಕರನಾರಾಯಣ, ಪ್ರಭಾಕರ ಕುಲಾಲ್, ದಿಲೀಪ್ ಉಪಸ್ಥಿತರಿದ್ದರು.






