ಟಿಪ್ಪರ್ - ಬೈಕ್ ಅಪಘಾತ: ಸವಾರ ಮೃತ್ಯು

ಕಾರ್ಕಳ, ನ.15: ಟಿಪ್ಪರ್ಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನ.14ರಂದು ಮಧ್ಯಾಹ್ನ ವೇಳೆ ಬೆಳ್ಮಣ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಎದುರು ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಬೆಳ್ಮಣ್ ಕಡೆಯಿಂದ ಪಡುಬಿದ್ರೆ ಕಡೆಗೆ ಹೋಗುತ್ತಿದ್ದ ಬೈಕ್, ಬೆಳ್ಮಣ್ ಕಡೆಗೆ ಹೋಗಲು ಯೂಟರ್ನ್ ಮಾಡುತ್ತಿದ್ದ ಟಿಪ್ಪರ್ಗೆ ಢಿಕ್ಕಿ ಹೊಡೆಯಿತ್ತನ್ನ ಲಾಗಿದೆ. ಇದರಿಂದ ಬೈಕ್ ಸವಾರ, ಅಪ್ರಾಪ್ತ ಬಾಲಕ ರಸ್ತೆಗೆ ಬಿದ್ದರೆನ್ನ ಲಾಗಿದೆ. ಇದರ ಪರಿಣಾಮ ಗಂಬೀರವಾಗಿ ಗಾಯಗೊಂಡ ಬಾಲಕ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




