ಉಡುಪಿ, ನ.17: ಬಿಜಾಪುರ ಮೂಲದ 76 ಬಡಗುಬೆಟ್ಟು ಗ್ರಾಮದಲ್ಲಿ ವಾಸಮಾಡಿಕೊಂಡಿದ್ದ ರವಿ ಎಲ್ಲಪ್ಪ ಎಂಬವರ ಪತ್ನಿ ಸುಮಿತ್ರಾ(38) ಎಂಬವರು ನ.15ರಂದು ಕಲ್ಸಂಕದ ಬಳಿ ಮನೆಕೆಲಸಕ್ಕೆಂದು ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.