ಬಂಟಕಲ್ಲು ವಾರ್ಡ್ ಸಭೆ: ಗ್ರಾಪಂ ಚುನಾವಣೆ, ಪಿಡಿಓ ನೇಮಕಕ್ಕೆ ನಿರ್ಣಯ

ಶಿರ್ವ, ನ.22: ಬಂಟಕಲ್ಲು ಅಂಗನವಾಡಿ ಕೇಂದ್ರದಲ್ಲಿ ಶನಿವಾರ ನಡೆದ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟಕಲ್ಲು ವಾರ್ಡ್‌ನ ವಾರ್ಡ್ ಸಭೆಯಲ್ಲಿ ಗ್ರಾಪಂ ಚುನಾವಣೆ, ಪೂರ್ಣಕಾಲಿಕ ಪಿಡಿಓ ನೇಮಕ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಶಿರ್ವ ಗ್ರಾಮ ಪಂಚಾಯತ್ ಕಾರ್ಯದರ್ಶಿ ಚಂದ್ರಮಣಿ ನಡೆಸಿಕೊಟ್ಟ ಈ ವಾರ್ಡ್ ಸಭೆಯಲ್ಲಿ ಸುಮಾರು 75 ಮಂದಿ ಗ್ರಾಮಸ್ಥರು ಭಾಗವಹಿಸಿ ದ್ದರು. ಗ್ರಾಮ ಪಂಚಾಯತ್‌ಗೆ ಸಂಬಂಧಪಟ್ಟ ಪ್ರಮುಖ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ಮತದಾರರ ಬೇಡಿಕೆಗಳು: ಅನುದಾನ ಇಲ್ಲದೆ ಗ್ರಾಮದ ಗ್ರಾಮಸ್ಥರು ಮೂಲಸೌಕರ್ಯಗಳಿಂದ ವಂಚಿತರಾಗಿದ್ದು, ವಾರ್ಡ್‌ಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಚುನಾವಣೆ ನಡೆಸದೆ ಇರುವುದರಿಂದ ಜನಪ್ರತಿನಿಧಿ ಗಳಿಲ್ಲದೆ ಈ ಪರಿಸ್ಥಿತಿ ಉಂಟಾಗಿದ್ದು, ಆದುದರಿಂದ ಸಕಾಲದಲ್ಲಿ ಗ್ರಾಪಂ ಸೇರಿದಂತೆ ಸ್ಥಳೀಯಾಡಳಿತ ಚುನಾವಣೆ ನಡೆಸುವಂತೆ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ಲಿಖಿತವಾಗಿ ತಿಳಿಸುವುದರ ಬಗ್ಗೆ ನಿರ್ಣಯಿಸಲಾಯಿತು.
ಪೂರ್ಣಕಾಲಿಕ ಅಭಿವೃದ್ಧಿ ಅಧಿಕಾರಿಗಳು ಇಲ್ಲದಿರುವ ಬಗ್ಗೆ ಗಮನ ಸಭೆಯಲ್ಲಿ ಗ್ರಾಮಸ್ಥರು ಗಮನ ಸೆಳೆದರು. ಇದರಿಂದ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮಾಜಿ ಸದಸ್ಯ ಕೆ.ಆರ್.ಪಾಟ್ಕರ್ ಮಂಡಿಸಿದ ನಿರ್ಣಯಕ್ಕೆ ವಾರ್ಡ್ ಮತದಾರರು ಸರ್ವಾನುಮತದ ಬೆಂಬಲ ವ್ಯಕ್ತಪಡಿಸಿದರು.
ಆಶಾ ಕಾರ್ಯಕರ್ತೆಯವ ವೇತನದ ಬಗ್ಗೆ ನಡೆಯುತ್ತಿರುವ ಹೋರಾಟಕ್ಕೆ ವಾರ್ಡ್‌ನ ಮತದಾರರು ಪೂರ್ಣವಾಗಿ ಬೆಂಬಲಿಸಿದ್ದು, ಅವರ ಸೇವೆಗೆ ಕನಿಷ್ಟ ವೇತನವನ್ನು ನೀಡುವವರೇ ಸರಕಾರಕ್ಕೆ ಬರೆಯುವ ಬಗ್ಗೆ ನಿರ್ಣಯಿಸಲಾ ಯಿತು. ಪಾದೂರಿನ ಐಎಸ್‌ಪಿಆರ್ ಎರಡನೇ ಹಂತದ ಕಾಮಗಾರಿ ಸಮಯದಲ್ಲಿ ನಡೆಯುವ ಬಂಡೆ ಸ್ಫೋಟದ ಪರಿಣಾಮ ಮನೆಗಳಲ್ಲಿ ಬಿರುಕು ಬಿಟ್ಟಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸುವಂತೆ ತೀರ್ಮಾನಿಸಲಾಯಿತು.
ಅನ್ನಭಾಗ್ಯದ ಅಕ್ಕಿಯನ್ನು ಪಡಿತರ ಚೀಟಿದಾರರು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚಿತವಾಗಿದ್ದು, ಅಂತಹ ವ್ಯಕ್ತಿಗಳ ಪಡಿತರ ಚೀಟಿ ರದ್ದುಗೊಳಿಸುವುದು ಹಾಗೂ ಎಪಿಎಲ್ ಪಡಿತರ ಚೀಟಿದಾ ರರಿಗೆ ದೊರೆಯುವಂತಾಗಬೇಕೆಂಬ ನಿರ್ಣಯ ಮಾಡಲಾಯಿತು.
ಸಭೆಯಲ್ಲಿ ಗ್ರಾಪಂ ಮಾಜಿ ಸದಸ್ಯ ಸತೀಶ್, ವಾಲೆಟ್ ಕಸ್ತಲಿನೊ, ಪಂಚಯತ್ ಸಿಬ್ಬಂದಿ ಯೋಗೀಶ್, ಸ್ಥಳೀಯ ಪ್ರಾಥುಕ ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಪಾಟ್ಕರ್, ಅಂಗನವಾಡಿ ಕಾರ್ಯಕರ್ತೆ ನಯಾ ಕುಂದರ್, ಸಹಾಯಕಿ ಸಂಧ್ಯಾ, ಆಶಾ ಕಾರ್ಯಕರ್ತೆಯರಾದ ಸವಿತಾ, ಕಮಲಾ ಉಪಸ್ಥಿತರಿದ್ದರು.






