ಸಮುದ್ರಕ್ಕೆ ಬಿದ್ದು ಮೀನುಗಾರ ನಾಪತ್ತೆ

ಮಲ್ಪೆ, ನ.24: ಮೀನುಗಾರಿಕೆ ಮಾಡುತ್ತಿದ್ದ ವೇಳೆ ತಮಿಳುನಾಡು ಮೂಲದ ಮೀನುಗಾರರೊಬ್ಬರು ಬೋಟಿನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ನಾಪತ್ತೆಯಾದವರನ್ನು ನಿತಿಯಾನಂತಮ್(31) ಎಂದು ಗುರುತಿಸಲಾಗಿದೆ. ಇವರು ನ.14ರಂದು ಇತರ ಮೀನುಗಾರರೊಂದಿಗೆ ಮೀನುಗಾರಿಕೆಗೆ ಮಲ್ಪೆ ಬಂದರಿನಿಂದ ಬೋಟನಲ್ಲಿ ಹೊರಟಿದ್ದರು. ನ.17ರಂದು ರಾತ್ರಿ ಮೀನುಗಾರಿಕೆ ಮಾಡಿ ನಂತರ ಬೋಟಿನಲ್ಲಿ ಮಲಗಿದ್ದ ನಿತಿಯಾನಂತಮ್ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story




