ಡಿಜೆ ವಿಚಾರದಲ್ಲಿ ಪರಸ್ಪರ ಗಲಾಟೆ: 10 ಮಂದಿ ವಶಕ್ಕೆ

ಕೋಟ, ಎ.18: ಕೋಟತಟ್ಟು ಗ್ರಾಮದ ದಾನಗುಂದ ಸೇತುವೆ ಬಳಿ ಎ.18ರಂದು ನಸುಕಿನ ವೇಳೆ ಒಂದು ಗಂಟೆ ಸುಮಾರಿಗೆ ಪರಸ್ಪರ ಗಲಾಟೆ ಮಾಡುತ್ತಿದ್ದ ಹತ್ತು ಮಂದಿಯನ್ನು ಕೋಟ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.
ಸುಮಾರು 8 ರಿಂದ 10 ಜನರು ಪರಸ್ಪರ ಮೈ ಕೈ ಮೇಲಾಯಿಸಿ ಗಲಾಟೆ ಮಾಡಿ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿದ್ದು, ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಪೊಲೀಸರನ್ನು ಕಂಡು ಕೆಲವರು ಓಡಿ ಹೋದರೆನ್ನಲಾಗಿದೆ. ಉಳಿದ ಆರೋಪಿಗಳಾದ ಕಿಶನ, ದರ್ಶನ, ಅನಿಲ, ವಿಶಾಲ, ಚೇತನ, ಆಟೋ ಯೋಗಿ, ರಾಕೇಶ, ವಿಕಾಸ, ಅರುಣ, ದೀಪಕ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಇವರುಗಳ ಮಧ್ಯೆ ಸುಮಾರು 2 ವರ್ಷಗಳ ಹಿಂದೆ ಗಣೇಶ ಹಬ್ಬದ ಡಿಜೆ ವಿಚಾರದಲ್ಲಿ ಮನಸ್ತಾಪ ಇದ್ದು ಇದೇ ವಿಚಾರದಲ್ಲಿ ಗಲಾಟೆ ಮಾಡುತ್ತಿರುವು ದಾಗಿ ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





