Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಮೇ 10ರಿಂದ ಅನಿಲ ಸಿಲಿಂಡರ್ ನಿಯಮದಲ್ಲಿ...

ಮೇ 10ರಿಂದ ಅನಿಲ ಸಿಲಿಂಡರ್ ನಿಯಮದಲ್ಲಿ ಬದಲಾವಣೆ

ವಾರ್ತಾಭಾರತಿವಾರ್ತಾಭಾರತಿ6 May 2025 9:33 PM IST
share
ಮೇ 10ರಿಂದ ಅನಿಲ ಸಿಲಿಂಡರ್ ನಿಯಮದಲ್ಲಿ ಬದಲಾವಣೆ

ಉಡುಪಿ: ಮೇ 10ರಿಂದ ದೇಶಾದ್ಯಂತ ಗೃಹ ಬಳಕೆಯ ಅನಿಲ ಸಿಲಿಂಡರ್ ಉಪಯೋಗಿಸುವವರಿಗೆ ಹೊಸ ನಿಯಮಗಳು ಜಾರಿಗೊಳ್ಳಲಿವೆ. ಅನಿಲ ಬಳಕೆಯಲ್ಲಿ ಸುರಕ್ಷತೆ, ಪಾರದರ್ಶಕತೆಯನ್ನು ಹೆಚ್ಚಿಸು ವಲ್ಲಿ ಹೊಸ ನಿಯಮಗಳು ಹೆಚ್ಚು ಉಪಯುಕ್ತವಾಗಲಿದ್ದು ಹಾಗೂ ಸ್ವಚ್ಛ ಇಂಧನ ಬಳಸುವತ್ತ ಜನರನ್ನು ಇದು ಪ್ರೋತ್ಸಾಹಿಸುವ ನಿರೀಕ್ಷೆ ಇದೆ.

ನಿಯಮಗಳ ಬದಲಾವಣೆಯಿಂದ ವೈಯಕ್ತಿಕ ಅನಿಲ ಬಳಕೆದಾರರು ಹಾಗೂ ಅನಿಲ ವಿತರಣ ನೆಟ್‌ವರ್ಕ್ ಇಬ್ಬರಿಗೂ ಅನುಕೂಲವಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈಗ ತರಲಾಗುತ್ತಿರುವ ಬದಲಾವಣೆಗಳು ಡಿಜಿಟಲ್ ಟ್ರ್ಯಾಕಿಂಗ್, ಸಬ್ಸಿಡಿ ಸುಧಾರಣೆ ಹಾಗೂ ಸುರಕ್ಷತೆಯ ಉನ್ನತೀಕರಣದಲ್ಲಿ ಹೆಚ್ಚು ಕೇಂದ್ರೀಕೃತವಾಗಿದೆ.

ಮೇ 10ರಿಂದ ಆಗಲಿರುವ ನಿಯಮದ ಬದಲಾವಣೆಗಳಲ್ಲಿ ಪ್ರಮುಖವಾದುದು ಅನಿಲ ಸಿಲಿಂಡರ್‌ಗಳ ಸುಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಯ ಅಳವಡಿಕೆ. ನೀವು ಬಳಸುವ ಪ್ರತಿಯೊಂದು ಸಿಲಿಂಡರ್‌ಗಳೂ ಇನ್ನು ಮುಂದೆ ಬಾರ್‌ಕೋಡ್/ಆರ್‌ಎಫ್‌ಐಡಿ ಅಥವಾ ಕ್ಯೂಆರ್ ಕೋಡ್‌ಗಳನ್ನು ಹೊಂದಿರುತ್ತದೆ. ಇದರಿಂದಾಗಿ ಅನಿಲ ಏಜೆನ್ಸಿಗಳಿಗೆ ಹಾಗೂ ಬಳಕೆದಾರರಿಗೆ ಅನಿಲ ಬಳಕೆ, ರಿಫಿಲ್ ಇತಿಹಾಸ ಹಾಗೂ ಸುರಕ್ಷತೆಯ ಸದ್ಯದ ಸ್ಥಿತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಟ್ರ್ಯಾಕ್ ಮಾಡಲು ಸಾಧ್ಯವಾಗಲಿದೆ.

ಈ ಸುಧಾರಣೆಯ ಮೂಲಕ ಅವಧಿ ಮುಗಿದ ಅಥವಾ ಅಕ್ರಮವಾಗಿ ಬಳಕೆಯಾಗುತ್ತಿರುವ ಸಿಲಿಂಡರ್‌ ಗಳನ್ನು ಪತ್ತೆ ಹಚ್ಚಿ ಸಿಲಿಂಡರ್‌ಗಳ ಸರಬರಾಜು ಚಕ್ರದ ಉತ್ತರದಾಯಿತ್ವವನ್ನು ಸುಧಾರಿಸುವ ನಿರೀಕ್ಷೆ ಹೊಂದಲಾಗಿದೆ.

ಹೊಸ ನಿಯಮಗಳಲ್ಲಿ ಅನಿಲ ಸಿಲಿಂಡರ್‌ಗಳ ಸುರಕ್ಷತೆಯ ಮಟ್ಟವನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಅವುಗಳ ಸಂಗ್ರಹ, ಸಾಗಾಣಿಕೆ ಹಾಗೂ ವಿತರಣಾ ವ್ಯವಸ್ಥೆಯನ್ನು ಹೆಚ್ಚು ಬಿಗುಗೊಳಿಸಲಾಗಿದೆ. ಇವುಗಳಲ್ಲಿ ಹೈಡ್ರೋಜನ್ ಗ್ಯಾಸ್ ಹಾಗೂ ಸಂಕುಚಿತ ಗ್ಯಾಸ್ (ಕಂಪ್ರೆಸ್‌ಡ್ ಗ್ಯಾಸ್) ಸಹ ಸೇರಿವೆ.

ಹೊಸ ಮಾರ್ಗಸೂಚಿಗಳಂತೆ ಈ ಅನಿಲಗಳನ್ನು ಹೇಗೆ ನಿರ್ವಹಿಸಬೇಕು, ವಿತರಿಣಾ ಕೇಂದ್ರಗಳಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಸಹ ಹೆಚ್ಚು ಪರಿಣಾಮಕಾರಿಯಾಗಿ ಮಾಡಲಾಗಿದೆ.

ಸಬ್ಸಿಡಿ ಪಡೆಯುವ ಬಗೆ: ಮೇ 15ರಿಂದ ಎಲ್‌ಪಿಜಿ ಸಬ್ಸಿಡಿ ಪಡೆಯುವ ಬಗ್ಗೆ ಹೊಸ ನಿರ್ದೇಶನಗಳನ್ನು ನೀಡಲಾಗಿದೆ. ತಮ್ಮ ಎಲ್‌ಪಿಜಿಯನ್ನು ಆಧಾರ್ ನಂಬರ್ ಹಾಗೂ ಚಾಲೂ ಇರುವ ಬ್ಯಾಂಕ್ ಖಾತೆಗಳಿಗೆ ಜೋಡಣೆ ಮಾಡಿದವರಿಗೆ ಮಾತ್ರ ಇನ್ನು ಎಲ್‌ಪಿಜಿ ಸಬ್ಸಿಡಿ ದೊರೆಯುತ್ತದೆ. ಸಬ್ಸಿಡಿ ಹಣ ಇಂಥವರ ಡಿಬಿಟಿ ಖಾತೆಗಳಿಗೆ ನೇರವಾಗಿ ಜಮಾಗೊಳ್ಳುತ್ತದೆ.

ವಾರ್ಷಿಕ ಆದಾಯ 10 ಲಕ್ಷ ರೂ.ಗಳನ್ನು ಮೀರಿದ ಕುಟುಂಬಗಳು ಇನ್ನು ಮುಂದೆ ಎಲ್‌ಪಿಜಿ ಸಬ್ಸಿಡಿ ಪಡೆಯುವ ಅರ್ಹತೆ ಹೊಂದಿರುವುದಿಲ್ಲ. ಇದರೊಂದಿಗೆ ಎಲ್ಲಾ ಸಬ್ಸಿಡಿ ಪಡೆಯುವವರು ಕೆವೈಸಿ ಮಾಡಿರುವುದು ಕಡ್ಡಾಯವಾಗಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಇವರು ಕೆವೈಸಿ (ನೌ ಯುವಕ ಕಸ್ಟಮರ್) ಕಡ್ಡಾಯವಾಗಿ ನವೀಕರಿಸಬೇಕು. ಸಬ್ಸಿಡಿಯಲ್ಲಿ ವಂಚನೆಯನ್ನು ತಡೆಯಲು ಹಾಗೂ ಅರ್ಹ ಬಳಕೆದಾರರ ಖಾತೆಗೆ ನೇರವಾಗಿ ಸಬ್ಸಿಡಿ ಹಣ ಸಿಗುವಂತಾಗಲು ಈ ಕ್ರಮ ಕೈಗೊಳ್ಳಲಾಗಿದೆ.

ಉಚಿತ ಅನಿಲ ಸಿಲಿಂಡರ್ ಯೋಜನೆ: ಇದರೊಂದಿಗೆ ಎಲ್‌ಪಿಜಿ ಸಿಲಿಂಡರ್ ಹೊಂದಿರುವ ಬಿಪಿಎಲ್ ಕುಟುಂಬ ಹಾಗೂ ಈವರೆಗೆ ಎಲ್‌ಪಿಜಿ ಸಂಪರ್ಕ ಪಡೆಯದಿರುವ ಬಡ ಕುಟುಂಬಗಳಿಗೆ ಹೊಸ ಅಭಿವೃದ್ಧಿ ಯೋಜನೆಯನ್ನು ತರಲಾಗುತ್ತಿದೆ. ಈ ಸೌಲಭ್ಯವನ್ನು ಗ್ರಾಮೀಣ ಭಾಗದ ಹಾಗೂ ಅತ್ಯಂತ ಬಡ ಕುಟುಂಬಕ್ಕೆ ಗ್ರಾಮಪಂಚಾಯತ್‌ಗಳ ಮೂಲಕ ನೀಡಲಾಗುತ್ತದೆ.

ಗ್ರಾಮೀಣ ಭಾಗದಲ್ಲಿ ವಾಸಿಸುವ, ಪ್ರದಾನಮಂತ್ರಿ ಉಜ್ವಲ ಯೋಜನೆಯಂಥ ಸಾಮಾಜಿಕ ಸ್ಕೀಮ್‌ಗಳಲ್ಲಿ ನೊಂದಾಯಿತಗೊಂಡಿರುವ ಕುಟುಂಬಗಳಿಗೆ ಇದನ್ನು ನೀಡಲಾಗುತ್ತದೆ. ಇವರು ಕಟ್ಟಿಗೆ ಅಥವಾ ಇತರ ವಸ್ತುಗಳನ್ನು ಬಳಸಿ ಅಡುಗೆ ಮಾಡುವುದನ್ನು ಬಿಟ್ಟು ಎಲ್‌ಪಿಜಿ ಬಳಸುವಂತೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಮೂಲಕ ಕುಟುಂಬದ ಆರೋಗ್ಯವನ್ನು ಸುಧಾರಿಸುವುದು ಹಾಗೂ ವಾಯು ಮತ್ತು ಪರಿಸರ ಮಾಲಿನ್ಯವನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ.

ಅನಿಲ ಸಿಲಿಂಡರ್‌ಗಳಿಗೆ ಅನ್ವಯಿಸುವ ಹೊಸ ನಿಯಮಗಳು ಬಳಕೆದಾರರಿಗೆ ಹಲವು ಅವಕಾಶ ಗಳೊಂದಿಗೆ ಜವಾಬ್ದಾರಿಗಳನ್ನು ನೀಡುತ್ತದೆ. ಸುರಕ್ಷ ಸಿಲಿಂಡರ್, ಹೆಚ್ಚು ಪಾರದರ್ಶಕತೆ ಹಾಗೂ ಡಿಜಿಟಲ್ ಟ್ರ್ಯಾಕಿಂಗ್‌ನಿಂದ ಬಳಕೆದಾರರು ಹೆಚ್ಚು ಲಾಭವಾಗಲಿದೆ. ಇದರೊಂದಿಗೆ ಅವರು ಸಬ್ಸಿಡಿ ಪಡೆಯಲು ತಮ್ಮ ಎಲ್‌ಪಿಜಿ ಖಾತೆಯನ್ನು ಸರಿಯಾದ ಆಧಾರ್ ಹಾಗೂ ಬ್ಯಾಂಕ್ ಖಾತೆಯ ಮಾಹಿತಿ ಗಳೊಂದಿಗೆ ಅಪ್‌ಡೇಟ್ ಮಾಡಿಕೊಳ್ಳುವುದು ಅನಿವಾರ್ಯವಾಗಲಿದೆ.

ಉಚಿತ ಅನಿಲ ಸಿಲಿಂಡರ್ ಯೋಜನೆಯಿಂದ ದೇಶದ ಗ್ರಾಮೀಣ ಭಾಗದ ಲಕ್ಷಾಂತರ ಕುಟುಂಬಗಳಿಗೆ ಲಾಭವಾಗುವ ನಿರೀಕೆ ಇದ್ದರೆ, ಸಬ್ಸಿಡಿ ಯೋಜನೆಯನ್ನು ಹೆಚ್ಚು ಬಿಗುಗೊಳಿಸುವುದರಿಂದ ಸರಕಾರಕ್ಕೂ ಹೆಚ್ಚು ಅನುಕೂಲವಾಗಲಿದೆ.

ಮೇ 10ರಿಂದ ಅನುಷ್ಠಾನಗೊಳ್ಳುವ ಹೊಸ ಅನಿಲ ಸಿಲಿಂಡರ್ ಯೋಜನೆಯಿಂದ ಸುರಕ್ಷ, ಪಾರದರ್ಶಕ ಹಾಗೂ ಪರಿಸರ ಸಹ್ಯ ಇಂಧನ ವ್ಯವಸ್ಥೆಯನ್ನು ಪರಿಣಾಮವಾಗಿ ಜಾರಿಗೊಳಿಸಲು ಸಾಧ್ಯವಾಗಲಿದೆ.ಇದು ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ಸರಕಾರದ ಸಂಪನ್ಮೂಲಗಳು ಪರಿಣಾಮಕಾರಿಯಾಗಿ ವಿತರಣೆಗೊಳ್ಳುವುದನ್ನು ಖಚಿತ ಪಡಿಸಲಿವೆ. ಅನಿಲ ಸಿಲಿಂಡರ್ ಬಳಕೆದಾರನ ಸುರಕ್ಷೆಯನ್ನು ಹೊಸ ನಿಯಮಗಳು ಇನ್ನಷ್ಟು ಪರಿಣಾಮಕಾರಿಯಾಗಿಸುವ ನಿರೀಕ್ಷೆ ಇದೆ.

(ವಿವಿಧ ಮೂಲಗಳಿಂದ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X