ಅಂದರ್ ಬಾಹರ್: 10 ಮಂದಿ ಬಂಧನ

ಶಂಕರನಾರಾಯಣ, ಜೂ.13: ಸಿದ್ದಾಪುರ ಗ್ರಾಮದ ಮಂಜುನಾಥ ಕಾಂಪ್ಲೆಕ್ಸ್ ಕಟ್ಟಡದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಜೂ.12ರಂದು ಅಂದರ್ ಬಾಹರ್ ಇಸ್ಪೀಟ್ ಜೂಗಾರಿ ಆಡುತ್ತಿದ್ದ 10 ಮಂದಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಸುಬ್ರಹ್ಮಣ್, ಅಶ್ರಫ್, ಸುನೀಲ್, ಧೀರಜ್, ಶಂಕರ, ಸುಧೀರ್ ಕುಮಾರ, ಮಧುಕರ, ಮನೋಹರ, ಗಣೇಶ, ರಾಮ ಬಂಧಿತ ಆರೋಪಿಗಳು. ಇವರಿಂದ 8,810ರೂ. ನಗದು, 10 ಮೊಬೈಲ್ ಪೋನ್‌ಗಳು, ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





