ಅಂದರ್ ಬಾಹರ್: 10 ಮಂದಿ ಸೆರೆ

ಅಮಾಸೆಬೈಲು, ಆ.17: ಅಮಾಸೆಬೈಲು ಗ್ರಾಮದ ಕೆಲಾ ಸಾಲಿಮಕ್ಕಿ ಎಂಬಲ್ಲಿ ಆ.15ರಂದು ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತಿದ್ದ 10 ಮಂದಿಯನ್ನು ಅಮಾಸೆಬೈಲು ಪೊಲೀಸರು ಬಂಧಿಸಿದ್ದಾರೆ.
ಸಾಲಿಮಕ್ಕಿಯ ಗೋಪಾಲ ಪೂಜಾರಿ(55), ಕುಮಾರ ಪೂಜಾರಿ(35), ಸತೀಶ ಪೂಜಾರಿ(32), ಉದಯ ಪೂಜಾರಿ(38), ಶಂಕರ ಪೂಜಾರಿ(36), ಕುಂಬಾರಮಕ್ಕಿಯ ಗೋಪಾಲ ಕೊಠಾರಿ, ಹಳೆ ಅಮಾಸೆಬೈಲುವಿನ ಸುರೇಶ ಕೊಠಾರಿ(42), ಯಳಮಕ್ಕಿಯ ಪ್ರದೀಪ್ ಶೆಟ್ಟಿ(46), ಶಾಮಿಹಕ್ಲುವಿನ ಸುರೇಂದ್ರ ನಾಯ್ಕ(42), ಉದಯ ನಾಯ್ಕ ಬಂಧಿತ ಆರೋಪಿಗಳು.
ಇವರಿಂದ 9,450ರೂ. ನಗದು, ನಾಲ್ಕು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





