ನಾಗರಿಕ ಸಮಿತಿಯಿಂದ 10 ಸಾವಿರ ಚಕ್ಕುಲಿ ವಿತರಣೆ

ಉಡುಪಿ, ಸೆ.5: ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಯ ಸ್ಮರಣಾರ್ಥ ಉಡುಪಿ ಜಿಲ್ಲಾ ನಾಗರೀಕ ಸಮಿತಿ ವತಿಯಿಂದ ಸಾರ್ವಜನಿಕರಿಗೆ 10ಸಾವಿರ ಉಚಿತ ಚಕ್ಕುಲಿಗಳನ್ನು ವಿತರಿಸ ಲಾಯಿತು.
ನಗರ ಮಾರುತಿ ವಿಥಿಕಾದಲ್ಲಿರುವ ನಾಗರಿಕ ಸಮಿತಿಯ ಕಚೇರಿ ಮುಂಭಾಗದಲ್ಲಿ ಗಣ್ಯರ ಸಮ್ಮುಖದಲ್ಲಿ ಚಕ್ಕುಲಿ ವಿತರಣೆಗೆ ಚಾಲನೆ ನಿಡಲಾಯಿತು. ಶ್ರೀಲಕ್ಷೀವರ ತೀರ್ಥ ಸ್ವಾಮೀಜಿಯ ಸಹೋದರ ಲಾತವ್ಯ ಆಚಾರ್ಯ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ, ಜಯಕರಶೆಟ್ಟಿ ಇಂದ್ರಾಳಿ, ನಾಗರಿಕ ಸಮಿತಿಯ ಅಧ್ಯಕ್ಷ ನಾಗೇಶ್ ಹೆಗ್ಡೆ ಮಾತನಾಡಿದರು.
ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಉದ್ಯಮಿ ಭಾಸ್ಕರ್ ಶೇರಿಗಾರ್, ಗೀತಾ ನಾಗೇಶ್ ಹೆಗ್ಡೆ, ರಾಘವೇಂದ್ರ ಪ್ರಭು ಕರ್ವಾಲು, ವಿಕಾಶ್ ಶೆಟ್ಟಿ, ಗಂಗಾಧರ್, ವಾಸುದೇವ, ಸುಮಾ ಆಚಾರ್ಯ, ದೇವಕಿ ಬಾರ್ಕೂರು ಉಪಸ್ಥಿತರಿದ್ದರು. ಬಳಿಕ ಸುಮಾರು 10 ಸಾವಿರ ಚಕ್ಕುಲಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಶಂಕರ್ ನಾಯಕ್ ತಂಡ ಸ್ಥಳದಲ್ಲೇ ಚಕ್ಕುಲಿ ತಯಾರಿಸಿ ಸಾರ್ವಜನಿಕರಿಗೆ ವಿತರಿಸಿದರು.




