ಉದ್ಯಾವರ ಎಂಇಟಿ ಶಾಲೆಗೆ ಶೇ.100 ಫಲಿತಾಂಶ
ಅಹೇತೆಶಾಮ್, ಅಲಿಫಾ, ಫಾತಿನ್, ರಿಝ್ವಾನ
ಉಡುಪಿ, ಮೇ 9: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉದ್ಯಾವರ ಎಂಇಟಿ ಆಂಗ್ಲ ಮಾಧ್ಯಮ ಶಾಲೆಯು ಶೇ.100 ಫಲಿತಾಂಶ ದಾಖಲಿಸಿ ವಿಶಿಷ್ಟ ಸಾಧನೆ ಮಾಡಿದೆ.
ಪರೀಕ್ಷೆ ಬರೆದ 17 ಬಾಲಕರು ಹಾಗೂ 14 ಬಾಲಕಿಯರು ಸೇರಿದಂತೆ ಒಟ್ಟು 31 ವಿದ್ಯಾರ್ಥಿಗಳ ಪೈಕಿ ಏಳು ಮಂದಿ ಉನ್ನತ ದರ್ಜೆ, 24 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಶೇಕ್ ಮುಹಮ್ಮದ್ ಅಹೆತೇಶಾಮ್ 588 (ಶೇ.94.08) ಅಂಕ ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಅಲಿಫಾ ಫಾತಿಮಾ 583(ಶೇ.93.28), ಶೇಕ್ ಫಾತಿನ್ ಅಹ್ಮದ್ 570(ಶೇ.91.02), ರಿಝ್ವಾನ ಬೆಪಾರಿ 569 (ಶೇ.91.04) ಅಂಕ ಗಳಿಸಿದ್ದಾರೆ.
Next Story