ಸಿ.ಬಿ.ಎಸ್.ಇ ಪರೀಕ್ಷೆ: ಕೋಡಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ಶೇ.100 ಫಲಿತಾಂಶ

ಕುಂದಾಪುರ, ಮೇ 14: 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಸಿ.ಬಿ.ಎಸ್.ಇ ಪರೀಕ್ಷೆಯಲ್ಲಿ ಕೋಡಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ಶೇ.100 ಫಲಿತಾಂಶ ದಾಖಲಿಸಿದೆ.
ಒಟ್ಟು 39 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಿದ್ದು 6 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 18 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 15 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಮುಹಮ್ಮದ್ ರಿಹಾನ್ 494, ಸಾನ್ವಿ 472, ಆಯಿಷ ಮಾಲಿ 452, ಹಸನ್ ರಝಿನ್ 446, ಮುಹಮ್ಮದ್ ಅದ್ನಾನ್ 442, ರಾನಿಯ ಮರಿಯಂ 421, ಅಂಕವನ್ನು ಪಡೆಯುವುದರ ಮೂಲಕ ಸಾಧನೆಯನ್ನು ಮಾಡಿದ್ದಾರೆ. ಉತ್ತಮ ಫಲಿತಾಂಶವನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
Next Story





