ಅಡಲ್ಟಿಂಗ್ 101: ವೃತ್ತಿಜೀವನ ಆವೃತ್ತಿ ಕುರಿತ ಉಪನ್ಯಾಸ

ಹಿರಿಯಡ್ಕ: ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ ಹಾಗೂ ಸಮಾಜಶಾಸ್ತ್ರ ವಿಭಾಗದ ಸಹಯೋಗದಲ್ಲಿ ಅಡಲ್ಟಿಂಗ್ 101: ವೃತ್ತಿಜೀವನ ಆವೃತ್ತಿ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಮಣಿಪಾಲ ಟಿ.ಎ.ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ ಇದರ ಸ್ಟ್ರಾಟಜಿ ವಿಭಾಗದ ಸಹಾ ಯಕ ಪ್ರಾಧ್ಯಾಪಕಿ ಡಾ.ರುಚಿ ಮಿಶ್ರಾ, ವಿದ್ಯಾರ್ಥಿಗಳಿಗೆ ವೃತ್ತಿಜೀವನದ ಆಯ್ಕೆ, ವೃತ್ತಿಪರ ನಡವಳಿಕೆ, ಜವಾಬ್ದಾರಿ, ನಿರ್ಧಾರ ಕೈಗೊಳ್ಳುವಿಕೆ ಹಾಗೂ ವೃತ್ತಿಜೀವನದ ಸವಾಲುಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ವಹಿಸಿದ್ದರು. ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ., ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ನಂದೀಶ್ ಕುಮಾರ್ ಕೆ.ಸಿ. ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಮೀನಾಕ್ಷಿ ನಾಯ್ಕ ಉಪಸ್ಥಿತರಿದ್ದರು. ವಿದ್ಯಾರ್ಥಿನಿಗಳಾದ ವರ್ಷ ಸ್ವಾಗತಿಸಿ, ದಿವ್ಯಾ ವಂದಿಸಿದರು.
Next Story




