ಮಣಿಪಾಲ: ಹೆಚ್ಚಿನ ಲಾಭದ ಆಸೆಗಾಗಿ 10.66 ಲಕ್ಷ ರೂ. ಕಳೆದುಕೊಂಡು ವಿದ್ಯಾರ್ಥಿ!
ಹಣ ಹೂಡಿಕೆ ಮಾಡಿದರೆ ಲಾಭ ನೀಡುವುದಾಗಿ ನಂಬಿಸಿ ಆನ್‌ಲೈನ್ ವಂಚನೆ

ಮಣಿಪಾಲ, ಮೇ 26: ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ವಿದ್ಯಾರ್ಥಿಯೊಬ್ಬನಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ವಿದ್ಯಾರ್ಥಿ ಸೌರಭ (22) ಎಂಬವರಿಗೆ ಅಪರಿಚಿತ ವ್ಯಕ್ತಿ ಆನ್‌ಲೈನ್ ಪಾರ್ಟ್ ಟೈಮ್ ಜಾಬ್ ಕುರಿತು ಲಿಂಕ್ ವೊಂದನ್ನು ಕಳುಹಿಸಿ, ಗ್ರೂಪ್‌ಗೆ ಸೇರ್ಪಡೆ ಮಾಡಿದ್ದನು. ವಿವಿಧ ರೀತಿಯ ಟಾಸ್ಕ್‌ಗಳನ್ನು ನೀಡಿ ಅದನ್ನು ಪುರ್ಣಗೊಳಿಸಿದರೆ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡುವುದಾಗಿ ನಂಬಿಸಿ ಸೌರಭ್‌ನ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದುಕೊಂಡಿ ದ್ದನು. ಟಾಸ್ಕ್‌ಗಳನ್ನು ಪೂರ್ಣಗೊಳಿಸಿದ ಸೌರಭ್ ಖಾತೆಗೆ 5600ರೂ. ಜಮಾ ಮಾಡಲಾಗಿತ್ತು.
ನಂತರ ಅಪರಿಚಿತ ವ್ಯಕ್ತಿಯು ಇನ್ನು ಹೆಚ್ಚು ಲಾಭ ಪಡೆಯಲು ಹೆಚ್ಚಿನ ಹಣವನ್ನು ಹೂಡಿಕೆ ಮಾಡುವಂತೆ ತಿಳಿಸಿದ್ದು, ಅದರಂತೆ ಸೌರಭ್ 10,66,590 ರೂ. ಹಣವನ್ನು ಮೇ 22ರಂದು ಹೂಡಿಕೆ ಮಾಡಿದ್ದನು. ಬಳಿಕ ಅಪರಿಚಿತ ವ್ಯಕ್ತಿಯು ಆ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿರುವುದಾಗಿ ದೂರಲಾಗಿದೆ.





