ಪೇತ್ರಿ: ಯಕ್ಷಗಾನ ಕಲಾರಂಗದ 110ನೇ ಮನೆ ಹಸ್ತಾಂತರ

ಉಡುಪಿ, ನ.23: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ರಶ್ಮಿತಾಳ ಬಡ ಕುಟುಂಬಕ್ಕೆ ಬ್ರಹ್ಮಾವರ ಸಮೀಪದ ಪೇತ್ರಿಯ ಕನ್ನಾರಿನಲ್ಲಿ, ಪಾರಂಪಳ್ಳಿ ಪಡುಕೆರೆ ಉಪಾಧ್ಯರಕೇರಿಯ ಬಂಧು ಗಳು ತಮ್ಮ ಗ್ರಾಮ ದೇವತೆಯ ಸೇವೆಯಾಗಿ ನಿರ್ಮಿಸಿದ ನೂತನ ಮನೆ ’ಇಷ್ಟದೇವತಾ ಕೃಪಾ’ದ ಹಸ್ತಾಂತರ ರವಿವಾರ ಸಂಜೆ ನಡೆಯಿತು.
ದೀಪ ಬೆಳಗಿಸಿ ಮನೆಯನ್ನು ಉದ್ಘಾಟಿಸಿದ ಹಿರಿಯರಾದ ಶ್ರೀಧರ ಉಪಾಧ್ಯ ದಂಪತಿಗಳು, ಮನೆಯನ್ನು ರಶ್ಮಿತಾರ ಹೆತ್ತವರಾದ ರಮೇಶ್ ನಾಯ್ಕ ಹಾಗೂ ಚಂದ್ರಾವತಿ ದಂಪತಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾ ಡಿದ ಅವರು, ಕಷ್ಟದಲ್ಲಿರುವವರಿಗೆ ಸ್ಪಂದಿಸುತ್ತಾ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಯಕ್ಷಗಾನ ಕಲಾರಂಗವನ್ನು ಮತ್ತು ಫಲಾನುಭವಿ ರಶ್ಮಿತಾಳ ಕುಟುಂಬವನ್ನು ಹರಸಿದರು.
ಅಧ್ಯಕ್ಷತೆ ವಸಿದ್ದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಕಲಾರಂಗ ಹಾಗೂ ವಿದ್ಯಾಪೋಷಕ್‌ನ ಕಾರ್ಯವನ್ನು ಶ್ಲಾಘಿಸಿದರು. ಅದೇ ರೀತಿ ಯಕ್ಷಶಿಕ್ಷಣವೂ ಸೇರಿದಂತೆ ಈ ಸಂಸ್ಥೆ, ಸಾಮಾಜಿಕವಾಗಿ ಸಾಂಸ್ಕೃತಿಕ ವಾಗಿ ಸರಕಾರಿ ಇಲಾಖೆಗಳು ಮಾಡಬೇಕಾದ ಕೆಲಸವನ್ನು ಮಾಡುತ್ತಿವೆ ಎಂದರು.
ಪಾರಂಪಳ್ಳಿ ಕೇರಿ ಉಪಾಧ್ಯರ ಮನೆತನದ ಲಕ್ಷ್ಮೀನಾರಾಯಣ ಉಪಾಧ್ಯ, ಡಾ.ಗಿರಿಧರ ಉಪಾಧ್ಯ, ಡಾ. ಮಧುಸೂದನ ಉಪಾಧ್ಯ, ಅರುಣ್ ಉಪಾದ್ಯರು ಮಾತನಾಡಿ, ಕಲಾರಂಗಕ್ಕೆ ಮುಂದೆಯೂ ಬೇಕಾದ ಸಹಾಯ ನೀಡಲು ತಾವು ಸಿದ್ಧವಿರುವುದಾಗಿ ತಿಳಿಸಿದರು.
ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವುಡರು ಮುಂದಿನ ವರ್ಷ ರಶ್ಮಿತಾಳ ಕಾಲೇಜು ಶುಲ್ಕವನ್ನು ಪೂರ್ತಿಯಾಗಿ ತಾವು ಭರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮನೆನಿರ್ಮಾಣಕ್ಕೆ ದೇಣಿಗೆ ನೀಡಿದ ಮಂಟಪ ನಟರಾಜ ಉಪಾಧ್ಯ, ಮಂಟಪ ಮನೋಹರ ಉಪಾಧ್ಯ, ಯಶೋದಾ ಗೋಪಾಲ ಉಪಾಧ್ಯ, ಪ್ರವೀಣ್ ಉಪಾಧ್ಯ, ರಾಘವೇಂದ್ರ ಉಪಾಧ್ಯ, ದಿನೇಶ್ ಉಪಾಧ್ಯ, ಶಶಿಧರ ಉಪಾಧ್ಯ, ಶ್ರೀನಿವಾಸ ಉಪಾಧ್ಯ ಮತ್ತು ನಾಗಭೂಷಣ ಉಪಾಧ್ಯರನ್ನು ಗೌರವಿಸ ಲಾಯಿತು.
ಹಿರಿಯ ಸಾಮಾಜಿಕ ಕಾರ್ಯಕರ್ತ ಕಮಲಾಕ್ಷ ಹೆಬ್ಬಾರ್, ಕನ್ನಾರು ನಾರಾಯಣ ಮಂಜ, ನಿವೃತ್ತ ಶಿಕ್ಷಕ ಭಾಸ್ಕರ ಭಟ್, ಚಂದ್ರಶೇಖರ ನಾವುಡ, ಟಿ. ಭಾಸ್ಕರ್ ರೈ, ಹರೀಶ್ ಶೆಟ್ಟಿ ಚೇರ್ಕಾಡಿ, ಮೇಜರ್ ಜಿ. ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಸಂಸ್ಥೆಯ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಸದಸ್ಯರಾದ ರಾಜಗೋಪಾಲ ಆಚಾರ್ಯ, ಅನಂತರಾಜ್ ಉಪಾಧ್ಯ, ರಿಯಣ್ಣ ಕಿದಿಯೂರು, ಡಾ. ರಾಜೇಶ್ ನಾವುಡ, ವಸಂತ ಆರ್, ನಾಗರಾಜ ಹೆಗಡೆ, ಡಾ. ಪ್ರತಿಮಾ ಆಚಾರ್ಯ, ವಿನೋದಾ ಎಂ. ಕಡೆಕಾರ್ ಭಾಗವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.






