ನಾರಾಯಣಗುರು ವಿದ್ಯಾನಿಧಿಯಿಂದ 114 ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ

ಉಡುಪಿ, ಫೆ.3: ಉಡುಪಿ ಬಿಲ್ಲವರ ಸೇವಾ ಸಂಘದ ನಾರಾಯಣಗುರು ವಿದ್ಯಾ ನಿಧಿ ಟ್ರಸ್ಟ್‌ನ 2024ನೇ ಸಾಲಿನ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಶನಿವಾರ ಬನ್ನಂಜೆ ಬಿಲ್ಲವ ಸಂಘದ ಶಿವಗಿರಿ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಸಂಪನ್ಮೋಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಶಿಕ್ಷಕ ದೀಪಕ್ ಕೆ.ಬೀರಾ, ಇಂದಿನ ವಿದ್ಯಾರ್ಥಿ ಗಳಲ್ಲಿ ಪುಸ್ತಕದ ಜ್ಞಾನ ಇದೆ. ಆದರೆ ಸಾಮಾಜಿಕ ಜ್ಞಾನದ ಕೊರತೆ ಇದೆ. ಹೆತ್ತವರು ಮಕ್ಕಳಲ್ಲಿ ಸಮಾನ್ಯ ಜ್ಞಾನ ಹಾಗೂ ಸಾಮಾಜಿಕ ಜ್ಞಾನ ಬೆಳೆಸುವ ಪ್ರಯತ್ನ ಮಾಡ ಬೇಕಾಗಿದೆ ಎಂದು ತಿಳಿಸಿದರು.
ನಾರಾಯಣ ಗುರುಗಳ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ವಿದ್ಯಾರ್ಥಿ ವೇತನಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಉನ್ನತ ಹುದ್ದೆಗಳನ್ನು ಏರಬೇಕು. ಸಂಘದ ಪರ ಅಭಿಮಾನ ಇಟ್ಟುಕೊಂಡು ಭವಿಷ್ಯದ ದಿನದಲ್ಲಿ ಇನ್ನಷ್ಟು ಮಕ್ಕಳಿಗೆ ಸಹಾಯ ಮಾಡುವಂತೆ ನೀವು ಕೂಡ ಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಸುಮಾರು 114 ಮಕ್ಕಳಿಗೆ ವಿದ್ಯಾರ್ಥಿಗಳಿಗೆ ವೇತನವನ್ನು ವಿತರಿಸಲಾಯಿತು. ಬನ್ನಂಜೆ ಬಿಲ್ಲವ ಸೇವಾ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶಶಿಧರ ಎಂ.ಅಮೀನ್, ಉಪಾಧ್ಯಕ್ಷ ಸದಾನಂದ ಪೂಜಾರಿ, ಕೋಶಾಧಿಕಾರಿ ಕೆ.ಗೋಪಾಲ ಪೂಜಾರಿ, ಸದಸ್ಯರು ಗಳಾದ ಆನಂದ ಪೂಜಾರಿ, ನಾರಾಯಣ ಜತ್ತನ್, ಬಿ.ಬಿ.ಪೂಜಾರಿ, ಕೃಷ್ಣಪ್ಪ ಅಂಚನ್, ಉದಯ ಪೂಜಾರಿ, ಪೂರ್ಣಿಮಾ ಅಂಚನ್, ನಾರಾಯಣ ಗುರು ವಿದ್ಯಾನಿಧಿ ಟ್ರಸ್ಟ್ ಸದಸ್ಯರಾದ ಸದಾನಂದ ಅಮೀನ್, ಲಕ್ಷ್ಮಣ ಪೂಜಾರಿ, ದಯಾನಂದ ಬನ್ನಂಜೆ, ಪ್ರಭಾಕರ ಪೂಜಾರಿ ಉಪಸ್ಥಿತರಿದ್ದರು.
ಬನ್ನಂಜೆ ಬಿಲ್ಲವ ಸೇವಾ ಸಂಘ ಅಧ್ಯಕ್ಷ ಮಾಧವ ಬನ್ನಂಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಧರ್ ಎಂ.ಅಮೀನ್ ಸ್ವಾಗತಿಸಿದರು. ಸದಾನಂದ ಅಮೀನ್ ವಂದಿಸಿದರು. ದಯಾನಂದ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.







