ಕೋಳಿ ಅಂಕಕ್ಕೆ ದಾಳಿ: 12 ಮಂದಿ ಬಂಧನ

ಬ್ರಹ್ಮಾವರ, ಜ.29: ಕೆಂಜೂರು ಗ್ರಾಮದ ಬಲ್ಲೆಬೈಲು ಕೊಳಂಬೆ ಎಂಬಲ್ಲಿ ಜ.28ರಂದು ಸಂಜೆ ವೇಳೆ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು 12 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳನ್ನು ಪ್ರವೀಣ್ ಕುಮಾರ್ ನಾಲ್ಕೂರು(49), ಸುರೇಶ ನಡೂರು(32), ಉಮೇಶ್ ಕೆಂಜೂರು(53), ಹರೀಶ್ ಕುಮಾರ್ ಚೇರ್ಕಾಡಿ(38), ಗಣೇಶ್ ಬೊಮ್ಮರಬೆಟ್ಟು(30), ಅಜಯ್ ಹೆಬ್ರಿ(23), ಮಂಜುನಾಥ ಹೊಸೂರು(32), ದಿನೇಶ್ ಬ್ರಹ್ಮಾವರ(49), ಸದಾಶಿವ ಸಂತೆಕಟ್ಟೆ(49), ಹರೀಶ ಬ್ರಹ್ಮಾವರ(39), ರಾಘವೇಂದ್ರ ಬ್ರಹ್ಮಾವರ(34) ಎಂದು ಗುರುತಿಸಲಾಗಿದೆ.
ಇವರಿಂದ ಒಟ್ಟು 21,700ರೂ. ನಗದು, 3 ಕೋಳಿಗಳು, ಕೋಳಿಗಳ ಕಾಲಿಗೆ ಕಟ್ಟಿದ 2 ಕೋಳಿ ಬಾಳ್, ಒಟ್ಟು 9 ದ್ವಿಚಕ್ರ ವಾಹನವನ್ನು ವಶಪಡಿಸಿ ಕೊಳ್ಳಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





