ಮಹಾನಗರ ಪಾಲಿಕೆಯಾಗಿ ಉಡುಪಿ: ಫೆ. 12ಕ್ಕೆ ತೋನ್ಸೆ, ಬಡಗುಬೆಟ್ಟು ವಿಶೇಷ ಗ್ರಾಮಸಭೆ
ಉಡುಪಿ, ಫೆ.10: ಉಡುಪಿ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಕುರಿತು ತೋನ್ಸೆ ಗ್ರಾಮ ಪಂಚಾಯತ್ ಕೆಮ್ಮಣ್ಣು ವ್ಯಾಪ್ತಿಯ ಪಡುತೋನ್ಸೆ ಗ್ರಾಮದ ಗ್ರಾಮಸ್ಥರಿಗೆ ಮಾಹಿತಿ ನೀಡಿ, ಅಭಿಪ್ರಾಯ ಸಂಗ್ರಹಿಸುವ ಬಗ್ಗೆ ವಿಶೇಷ ಗ್ರಾಮಸಭೆಯನ್ನು ಫೆ.12ರ ಬುಧವಾರ ಅಪರಾಹ್ನ 12:30ಕ್ಕೆ ಕೆಮ್ಮಣ್ಣು ಹಿಂದೂ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಬಡಗಬೆಟ್ಟು ವಿಶೇಷ ಗ್ರಾಮಸಭೆ: ಅದೇ ರೀತಿ 80 ಬಡಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಗೆ ಮಾಹಿತಿ ನೀಡಿ, ಅಭಿಪ್ರಾಯ ಸಂಗ್ರಹಿಸುವ ಬಗ್ಗೆ ವಿಶೇಷ ಗ್ರಾಮಸಭೆ ಬುಧವಾರ ಅಪರಾಹ್ನ 3:00 ಗಂಟೆಗೆ ಬಡಗಬೆಟ್ಟು ಗ್ರಾಮ ಪಂಚಾಯತ್‌ನ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





