ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಹೊಡೆದಾಟ: 12 ಮಂದಿ ವಶಕ್ಕೆ

ಉಡುಪಿ, ಮೇ 17: ಬನ್ನಂಜೆ ತಾಲೂಕು ಕಚೇರಿ ಎದುರು ಮೇ 16ರಂದು ಪರಸ್ಪರ ಕೈ-ಕೈ ಮಿಲಾಯಿಸಿ ಭಯದ ಮತ್ತು ಪ್ರಕ್ಷುಬ್ದ ವಾತಾವರಣ ಉಂಟು ಮಾಡಿದ ಆರೋಪದಲ್ಲಿ 12 ಮಂದಿಯನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸುಹಾಸಿನಿ, ಪ್ರಸಾದ್, ಪುನೀತ್, ಜಯಂತಿ, ಮಮತಾ, ವಿಜಯಲಕ್ಷ್ಮಿ, ಕೃಷ್ಣ ವೇಣಿ, ಲಕ್ಷ್ಮೀ, ಶಂಕರವ್ವ, ಭಾರತಿ, ಸುಮಂತ್, ಮಣಿಕಂಠ ಎಂಬವರು ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ದೂಡಾಡಿ ಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸಾರ್ವಜನಿಕ ಸ್ಥಳದಲ್ಲಿ ಭಯದ ಮತ್ತು ಪ್ರಕ್ಷುಬ್ದ ವಾತಾವರಣ ಉಂಟು ಮಾಡಿದ ಎಲ್ಲರನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





