ಜೂ. 12: ಉಡುಪಿ ಜಿಲ್ಲಾ ಶಿಕ್ಷಕರಿಗೆ "ಶಾಲೆಗಳಲ್ಲಿ ಕ್ಲೈಮೇಟ್ ಸಾಕ್ಷರತೆ" ಕಾರ್ಯಾಗಾರ
ಉಡುಪಿ, ಜೂ.10: ಭಾರತ ಜ್ಞಾನ ವಿಜ್ಞಾನ ಸಮಿತಿ ಉಡುಪಿ ಜಿಲ್ಲೆ ಮತ್ತು ಸಿ ಪಿ ಆರ್ ಪರಿಸರ ಶಿಕ್ಷಣ ಕೇಂದ್ರ ಚೆನ್ನೈ ಇದರ ಜಂಟಿ ಆಶ್ರಯದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಮತ್ತು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಉಡುಪಿ ಜಿಲ್ಲೆ ಇದರ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲಾ ಶಿಕ್ಷಕರಿಗೆ "ಶಾಲೆಗಳಲ್ಲಿ ಕ್ಲೈಮೇಟ್ ಸಾಕ್ಷರತೆ" ಇದರ ಕುರಿತಾಗಿ ಒಂದು ದಿನದ ಕ್ಲೈಮೇಟ್ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಗಾರವು ಜೂ. 12ರ ಬೆಳಗ್ಗೆ 10 ಗಂಟೆಯಿಂದ ಸಂಜೆ 4:30 ವರೆಗೆ ರೆಡ್ ಕ್ರಾಸ್ ಭವನ ಬ್ರಹ್ಮಗಿರಿ ಉಡುಪಿ ಇಲ್ಲಿ ನಡೆಯಲಿದೆ. ಡಾ. ಅಶೋಕ್ ಕಾಮತ್ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಇವರು ಈ ಕಾರ್ಯಗಾರವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ. ಗಣನಾಥ್ ಎಕ್ಕಾರು ಕಾರ್ಯದರ್ಶಿ ರೆಡ್ ಕ್ರಾಸ್ ಸೊಸೈಟಿ ಉಡುಪಿ ಜಿಲ್ಲೆ, ಡಾ. ಯಲ್ಲಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಡುಪಿ ಇವರು ಪಾಲ್ಗೊಳ್ಳಲಿದ್ದಾರೆ.
ಉದ್ಘಾಟನಾ ಸಮಾರಂಭದ ನಂತರ ಹಾಸನದ ಬರಹಗಾರ ಹಾಗೂ ಪರಿಸರ ಕಾರ್ಯಕರ್ತ ಎಸ್ ರವಿಕುಮಾರ್ ಇವರಿಂದ "ಅತಿಸೆಖೆ - ಅತಿ ಮಳೆ",
ರವಿಶಂಕರ್ ಎಸ್ ಸಂಚಾಲಕರು ಸಿ ಪಿ ಆರ್ ಪರಿಸರ ಶಿಕ್ಷಣ ಕೇಂದ್ರ ಚೆನೈ ಇವರಿಂದ "ಸುಸ್ಥಿರ ಅಭಿವೃದ್ಧಿಗಾಗಿ ಪರಿಸರ ಶಿಕ್ಷಣ" ಹಾಗೂ ಅಹಮದ್ ಹಗರೆ ರಾಜ್ಯ ಸಮಿತಿ ಸದಸ್ಯರು ಬಿಜಿವಿಎಸ್ ಇವರಿಂದ "ಭೂಮಿಗೆ ಜ್ವರ _ ನಾವೇನು ಮಾಡಬಹುದು" ಎಂಬ ವಿಷಯಗಳ ಬಗ್ಗೆ ವಿಚಾರ ಮಂಡನೆ ಮತ್ತು ಸಂವಾದ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸತ್ಯನಾ ಕೊಡೇರಿ ಮತ್ತು ಬಿ ಜಿ ವಿ ಎಸ್ ಸಂಗಾತಿಗಳಿಂದ ಪರಿಸರ ಗೀತೆಗಳ ಪ್ರಸ್ತುತಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಭಾರತ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿ ಸಂತೋಷ್ ನಾಯಕ್ ಪಟ್ಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.