ಫೆ. 12ರಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉಡುಪಿಗೆ ಭೇಟಿ

ಉಡುಪಿ, ಫೆ.11: ರಾಜ್ಯ ಸಾರಿಗೆ ಮತ್ತು ಮುಜರಾಯಿ ಇಲಾಖಾ ಸಚಿವ ರಾಮಲಿಂಗಾ ರೆಡ್ಡಿ ಅವರು ಫೆ. 12ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದು, ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಫೆ. 12ರಂದು ಬೆಳಗ್ಗೆ 10ಗಂಟೆಗೆ ಗಂಗೊಳ್ಳಿಗೆ ಆಗಮಿಸುವ ಸಚಿವರು, 11:30ಕ್ಕೆ ಉಡುಪಿಗೆ ಬಂದು ಇನ್ನೊಂದು ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ. ಅಪರಾಹ್ನ 3:00ಕ್ಕೆ ಉಡುಪಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಕಾರ್ಮಿಕ ಸಚಿವರು ಕುಂದಾಪುರಕ್ಕೆ: ಕುಂದಾಪುರ ಕೋಡಿಯಲ್ಲಿ ನಡೆಯಲಿರುವ ಕುಂದ ಉತ್ಸವದ ಉದ್ಘಾಟನೆಯನ್ನು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ರಾತ್ರಿ 8 ಗಂಟೆಗೆ ನೆರವೇರಿಸಲಿದ್ದಾರೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
Next Story





