ಉಡುಪಿ: ಗೀತಾಮಂದಿರದಲ್ಲಿ ಜೂ.13ರಿಂದ ಹಲಸು, ಮಾವು ಮೇಳ

ಉಡುಪಿ, ಜೂ.12: ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ರಾಜಾಂಗಣದ ಬಳಿಯ ಗೀತಾಮಂದಿರದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಭಾರತ್ ಮೇಳದ ಪ್ರಯುಕ್ತ ಹಲಸು- ಮಾವು - ಹಣ್ಣುಗಳ ಹಬ್ಬ ನಡೆಯಲಿದೆ. ಹಣ್ಣುಗಳ ಮೇಳ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ತೆರೆದಿರುತ್ತದೆ.
ಹಣ್ಣುಗಳ ಈ ವಿಶೇಷ ಹಬ್ಬದಲ್ಲಿ ಬಗೆ ಬಗೆಯ ಸಿಹಿಯಾದ ಮಾವಿನ ಹಣ್ಣು, ಕೆಂಪು ಹಲಸು, ರುದ್ರಾಕ್ಷಿ ಏಕಾದಶಿ, ಸಿಂಧೂರ, ಕೆಂಪು ಹಲಸು, ಚಂದ್ರ ಹಲಸು, ವಿವಿಧ ತಳಿಯ ಕಲ್ಲಂಗಡಿ, ಸೇಬು, ಮತ್ತಿತರ ಹಣ್ಣುಗಳು, ಹಣ್ಣುಗಳ ಐಸ್‌ಕ್ರೀಮ್, ಹಲಸಿನ ಹೋಳಿಗೆ, ಜಿಲೇಬಿ, ಮುಳ್ಕ, ಕಡುಬು ಸಹಿತ ಹಣ್ಣಿನ ಉತ್ಪನ್ನಗಳು, ಕೈಮಗ್ಗದ ಪ್ರಾತ್ಯಕ್ಷಿಕೆ, ಕೈಮಗ್ಗದ ಸೀರೆ, ಅಂಗಿಗಳು, ಬಟ್ಟೆಗಳು, ಖಾದಿ ವಸ್ತ್ರಗಳು, ಆಯುರ್ವೇದಿಕ್ ಹಾಗೂ ಗೃಹ ತಯಾರಿಕೆಯ ಉತ್ಪನ್ನಗಳು, ವಿವಿಧ ತಳಿಯ ಹಣ್ಣಿನ, ಹೂವಿನ ಕಸಿ ಗಿಡಗಳು ಹಾಗೂ ವೈವಿಧ್ಯಮಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ ಎಂದು ಪರ್ಯಾಯ ಪುತ್ತಿಗೆ ಮಠದ ಪ್ರಕಟಣೆ ತಿಳಿಸಿದೆ.
Next Story





