ಉಡುಪಿ ಜಿಲ್ಲೆಯಲ್ಲಿ 1.31 ಲಕ್ಷ ಮನೆಗಳ ಸಮೀಕ್ಷೆ ಪೂರ್ಣ: ಜಿಲ್ಲೆಯಲ್ಲಿ ಶೇ.36.7 ಸಾಧನೆ

ಉಡುಪಿ, ಅ.2: ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿ ರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ 11ನೇ ದಿನವಾದ ಇಂದು ಉಡುಪಿ ಜಿಲ್ಲೆಯಲ್ಲಿ ಒಟ್ಟು 25,388 ಮನೆಗಳ ಸಮೀಕ್ಷೆಯನ್ನು ಗಣತಿದಾರರು ಪೂರ್ಣಗೊಳಿಸಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಗಣತಿಗೆ ಲಭ್ಯವಿರುವ 3,57,936 ಮನೆಗಳ ಪೈಕಿ ಈವರೆಗೆ ಒಟ್ಟು 1,31,350 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಈ ಮೂಲಕ ಶೇ.36.7ರಷ್ಟು ಗಣತಿ ಪೂರ್ಣಗೊಂಡಂತಾಗಿದೆ.
ಸೆ.22ರಿಂದ ಅ.7ರವರೆಗೆ ನಡೆಯಲು ನಿಗದಿಯಾಗಿರುವ ಸಮೀಕ್ಷೆಯಲ್ಲಿ ಗುರುವಾರದವರೆಗೆ ತಾಲೂಕುವಾರು ನಡೆದ ಸಮೀಕ್ಷೆಯ ಸಂಪೂರ್ಣ ವಿವರ ಹೀಗಿದೆ.
ತಾಲೂಕು, ಒಟ್ಟು ಕುಟುಂಬಗಳು, ಬ್ಲಾಕ್‌ಗಳು, ಇಂದು ಪೂರ್ಣಗೊಂಡ ಮನೆ, ಸಮೀಕ್ಷೆ ಪೂರ್ಣಗೊಂಡ ಮನೆಗಳ ವಿವರ)
ಉಡುಪಿ 97,812 844 4385 17,371
ಕುಂದಾಪುರ 65,939 621 5458 28,075
ಕಾರ್ಕಳ 58,050 531 4554 23,375
ಕಾಪು 45,274 403 3136 13,842
ಹೆಬ್ರಿ 13,236 121 1279 7,735
ಬ್ರಹ್ಮಾವರ 51,428 465 4186 26,248
ಬೈಂದೂರು 26,197 246 2390 14,704
ಒಟ್ಟು 357936 3231 25388 131350





