ಉಡುಪಿ ಜಿಲ್ಲೆಯಾದ್ಯಂತ ಗಾಳಿಮಳೆ: ಐದು ಮನೆಗಳಿಗೆ ಹಾನಿ, 1.45 ಲಕ್ಷ ರೂ. ನಷ್ಟ

ಉಡುಪಿ, ಜು.6: ಉಡುಪಿ ಜಿಲ್ಲೆಯಾದ್ಯಂತ ರವಿವಾರ ಕೂಡ ಮಳೆಯ ಅಬ್ಬರ ಮುಂದುವರೆದಿದ್ದು, ಗಾಳಿಮಳೆಗೆ ಐದು ಮನೆಗಳಿಗೆ ಹಾನಿಯಾಗಿ ಒಟ್ಟು 1.45ಲಕ್ಷ ರೂ. ನಷ್ಟ ಉಂಟಾಗಿದೆ.
ಕುಂದಾಪುರ ತಾಲೂಕಿನ ಹರ್ಕೂರ್ ಗ್ರಾಮದ ಸುಲೋಚನ ಎಂಬವರ ವಾಸ್ತವ್ಯದ ಮನೆಯ ಗೋಡೆ ಹಾಗೂ ಮೇಲ್ಛಾವಣಿ ಕುಸಿದು ಬಿದ್ದು ಭಾಗಶಃ ಹಾನಿಯಾಗಿ 50,000ರೂ., ಮಚ್ಚಟ್ಟು ಕುಂದ ಗ್ರಾಮದ ಪ್ರೇಮ ಆಚಾರ್ತಿ ಅವರ ವಾಸ್ತವ್ಯದ ಅಡುಗೆ ಮನೆಯ ಗೋಡೆ ಬಿದ್ದು ಭಾಗಶ: ಹಾನಿಯಾಗಿ 30,000ರೂ., ಕೊರ್ಗಿ ಗ್ರಾಮದ ಸಾಧು ಅವರ ಮನೆಯ ಮೇಲೆ ಮರ ಬಿದ್ದು 20,000ರೂ. ನಷ್ಟ ಉಂಟಾಗಿದೆ.
ಹಳನಾಡು ಗುಡ್ಡಿ ಗ್ರಾಮದ ಸುಶೀಲ ಅವರ ಮನೆಯ ಮೇಲ್ಛಾವಣಿಯ ಗಾಳಿ ಮಳೆಗೆ ಹಾನಿಯಾಗಿ 15,000ರೂ., ಹಾಲಾಡಿ ಗ್ರಾಮದ ಗುಲಾಬಿ ಅವರ ಮನೆಯ ಮೇಲ್ಛಾವಣಿಯು ಗಾಳಿ ಮಳೆಗೆ ಭಾಗಶ ಹಾನಿಗೊಂಡಿದ್ದು, ಇದರಿಂದ 30,000ರೂ. ನಷ್ಟವಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.
ಕಳೆದ 24ಗಂಟೆ ಅವಧಿಯಲ್ಲಿ ಕಾರ್ಕಳ-58.1ಮಿ.ಮೀ., ಕುಂದಾಪುರ -62.4ಮಿ.ಮೀ., ಉಡುಪಿ 64.2ಮಿ.ಮೀ., ಬೈಂದೂರು- 71.4ಮಿ.ಮೀ., ಬ್ರಹ್ಮಾವರ-63.5ಮಿ.ಮೀ., ಕಾಪು-49.1ಮಿ.ಮೀ., ಹೆಬ್ರಿ- 75.8 ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 64.1 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.