ಮನೆಗೆ ನುಗ್ಗಿ 14.67 ಲಕ್ಷ ರೂ. ಮೌಲ್ಯದ ನಗನಗದು ಕಳವು: ಪ್ರಕರಣ ದಾಖಲು

ಬ್ರಹ್ಮಾವರ, ಮಾ.7: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಘಟನೆ ಬಾರಕೂರು ಹೇರಾಡಿ ಎಂಬಲ್ಲಿ ಮಾ.6ರಂದು ರಾತ್ರಿ ವೇಳೆ ನಡೆದಿದೆ.
ಮಂಜುನಾಥ ರಾವ್ ಎಂಬವರು ತನ್ನ ಪತ್ನಿ ಜೊತೆ ಮನೆಗೆ ಬೀಗ ಹಾಕಿ ಬಾರಕೂರುನಲ್ಲಿ ನಡೆಯುತ್ತಿದ್ದ ನಾಗಮಂಡಲ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ವೇಳೆ ಮನೆಯ ಎದುರು ಬಾಗಿಲು ಒಡೆದು ಒಳನುಗ್ಗಿದ ಕಳ್ಳರು, ಕಾಪಾಟಿನಲ್ಲಿದ್ದ 1 ಚಿನ್ನದ ಮುತ್ತಿನ ಸರ ಮತ್ತು ಪೆಂಡೆಂಟ್, ಎರಡು ಚಿನ್ನದ ಬಳೆ, ಒಂದು ಜೋತೆ ಚಿನ್ನದ ಬೆಂಡೋಲೆ, 4 ಚಿನ್ನದ ಉಂಗುರ, 3 ಚಿನ್ನದ ಬೆಂಡೋಲೆ, ಬೆಳ್ಳಿಯ ಹರಿವಾಣ ಮತ್ತು ಕವಳಿಗೆ ಹಾಗೂ 49,000ರೂ. ನಗದು ಕಳವು ಮಾಡಿಕೊಂಡು ಹೋಗಿದ್ದಾರೆಂದು ದೂರಲಾಗಿದೆ. ಕಳವಾದ ಒಟ್ಟು ಸೊತ್ತುಗಳ ಒಟ್ಟು ಮೌಲ್ಯ 14,67,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





