ಉಡುಪಿ: ನ.15ರಂದು ಯಕ್ಷಗಾನ ಕಲಾರಂಗ ವಿವಿಧ ಪ್ರಶಸ್ತಿ ಪ್ರದಾನ

ಉಡುಪಿ, ನ.11: ಯಕ್ಷಗಾನ ಕಲಾರಂಗ ನೀಡುವ 2026ನೇ ಸಾಲಿನ ವಿವಿಧ ಯಕ್ಷಗಾನ ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 15ರ ರವಿವಾರ ಉಡುಪಿಯ ಶಾರದಾ ಮಂಟಪ ರಸ್ತೆಯಲ್ಲಿರುವ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‌ಮೆಂಟ್, ಟ್ರೈನಿಂಗ್ ರಿಸರ್ಚ್ ಸೆಂಟರ್ (ಐವೈಸಿ)ನಲ್ಲಿ ಸಂಜೆ 4:30ಕ್ಕೆ ಗಂಟೆಗೆ ಜರಗಲಿದೆ.
ಪೇಜಾವರ ಮಠಾಧೀಶರಾದ ಶ್ರೀವಿವಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ. ಬೆಂಗಳೂರಿನ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಡಾ.ಟಿ.ಶ್ಯಾಮ್ ಭಟ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಾರ್ಕಳದ ಸುನಿಲ್ ಕುಮಾರ್ ಟ್ರಾನ್ಸ್‌ಫಾರ್ಮರನ್ನು ಉದ್ಘಾಟಿಸಲಿದ್ದಾರೆ.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಯಕ್ಷ ವಿದ್ಯಾಪೋಷಕ್‌ನ 74 ವಿದ್ಯಾರ್ಥಿಗಳಿಗೆ ಒಟ್ಟು8,34,500ರೂ. ಸಹಾಯಧನವನ್ನು ವಿತರಿಸಲಿದ್ದಾರೆ. ಬೆಂಗಳೂರು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಸಾಂತ್ವನ ನಿಧಿಯನ್ನು ವಿತರಿಸಲಿದ್ದಾರೆ. ಬೆಂಗಳೂರಿನ ಉದ್ಯಮಿ ಹರೀಶ್ ರಾಯಸ್, ಮಂಗಳೂರಿನ ಲೀಲಾಕ್ಷ ಬಿ. ಕರ್ಕೇರ, ಹೊನ್ನಾವರ ಎಂ.ಪಿ.ಇ ಸೊಸೈಟಿಯ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾನಿ ಕೃಷ್ಣಮೂರ್ತಿ ಭಟ್, ಶ್ರೀ ವಿನಾಯಕ ಯಕ್ಷಕಲಾ ತಂಡ ಕೆರೆಕಾಡು ಅಧ್ಯಕ್ಷ ಜಯಂತ ಉೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಒಟ್ಟು 24 ಮಂದಿ ಹಿರಿಯ ಯಕ್ಷಗಾನ ಕಲಾವಿದರಿಗೆ ತಲಾ 20,000 ರೂ. ನಗದು ಪುರಸ್ಕಾರ ವನ್ನೊಳಗೊಂಡ ವಿವಿದ ಕಲಾವಿದರ ಸಂಸ್ಮರಣೆಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಒಂದು ಲಕ್ಷ ರೂ. ಬಹುಮಾನ ಮೊತ್ತದ ಶ್ರೀವಿಶ್ವೇಶತೀರ್ಥ ಪ್ರಶಸ್ತಿಯನ್ನು ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡಕ್ಕೆ ಹಾಗೂ ಯಕ್ಷಚೇತನ ಪ್ರಶಸ್ತಿಯನ್ನು ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕಿಶೋರ್ ಸಿ. ಉದ್ಯಾವರ ಇವರಿಗೆ ಪ್ರದಾನ ಮಾಡಲಾಗುವುದು.
ಸಮಾರಂಭದ ಪೂರ್ವದಲ್ಲಿ ಅಪರಾಹ್ನ 1:30ರಿಂದ 4:30ರವರೆಗೆ ಬಡಗುತಿಟ್ಟಿನ ಕಲಾವಿದರಿಂದ ಯಕ್ಷಗಾನ ‘ರಾಜಾ ದ್ರುಪದ’ ಪ್ರಸ್ತುತ ಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.
ವಿವಿಧ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದರ ವಿವರ ಹೀಗಿದೆ.
ಡಾ.ಬಿ.ಬಿ.ಶೆಟ್ಟಿ ಸ್ಮಾರಕ ಪ್ರಶಸ್ತಿ ರಾಮಚಂದ್ರ ಪಾಂಗಣ್ಣಾಯ, ಪ್ರೊ.ಬಿ.ವಿ. ಆಚಾರ್ಯ ಸ್ಮಾರಕ ಪ್ರಶಸ್ತಿ ನರಸಿಂಹ ಮರಕಾಲ, ನಿಟ್ಟೂರು ಸುಂದರ ಶೆಟ್ಟಿ-ಮಹೇಶ ಡಿ.ಶೆಟ್ಟಿ ಸ್ಮಾರಕ ಪ್ರಶಸ್ತಿ ಹನುಮಂತ ಲಚ್ಚಗೌಡ ಸಿದ್ಧಾಪುರ, ಬಿ.ಜಗಜ್ಜೀವನದಾಸ ಶೆಟ್ಟಿ ಸ್ಮಾರಕ ಪ್ರಶಸ್ತಿ ಸರಪಾಡಿ ವಿಠಲಶೆಟ್ಟಿ, ಕೆ.ವಿಶ್ವಜ್ಞ ಶೆಟ್ಟಿ ಸ್ಮಾರಕ ಪ್ರಶಸ್ತಿ- ಮಂಜು ನಾಗಪ್ಪ ಗೌಡ ಗುಣವಂತೆ, ಕುತ್ಪಾಡಿ ಆನಂದ ಗಾಣಿಗ ಸ್ಮಾರಕ ಪ್ರಶಸ್ತಿ ರಾಮಚಂದ್ರ ಹೆಗಡೆ ಗುಡ್ಡೆದಿಂಬ.
ಭಾಗವತ ನಾರ್ಣಪ್ಪ ಉಪ್ಪೂರ ಸ್ಮಾರಕ ಪ್ರಶಸ್ತಿ- ಸುಬ್ರಹ್ಮಣ್ಯ ಐತಾಳ ಶಂಕರನಾರಾಯಣ, ಮಾರ್ವಿ ರಾಮಕೃಷ್ಣ ಹೆಬ್ಬಾರ, ಮಾರ್ವಿ ವಾದಿರಾಜ ಹೆಬ್ಬಾರ ಸ್ಮಾರಕ ಪ್ರಶಸ್ತಿ- ಬೇಳಂಜೆ ಸುಂದರ ನಾಯ್ಕ, ಶಿರಿಯಾರ ಮಂಜು ನಾಯ್ಕ ಸ್ಮಾರಕ ಪ್ರಶಸ್ತಿ- ಉಪ್ಪುಂದ ನಾಗೇಂದ್ರ ರಾವ್, ಕೋಟ ವೈಕುಂಠ ಸ್ಮಾರಕ ಪ್ರಶಸ್ತಿ- ಹಾರಾಡಿ ರಮೇಶ ಗಾಣಿಗ.
ಪಡಾರು ನರಸಿಂಹ ಶಾಸ್ತ್ರಿ ಸ್ಮಾರಕ ಪ್ರಶಸ್ತಿ- ಜಿ.ಎಂ.ಶಿವಾನಂದ ಗೀಜಗಾರು ಸಾಗರ, ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮಾರಕ ಪ್ರಶಸ್ತಿ- ಬಸವ ಹಟ್ಟಿಯಂಗಡಿ, ಮಲ್ಪೆ ಶಂಕರನಾರಾಯಣ ಸಾಮಗ ಸ್ಮಾರಕ ಪ್ರಶಸ್ತಿ- ಜಯರಾಮ ಭಟ್ ಪದ್ಯಾಣ, ಐರೋಡಿ ರಾಮ ಗಾಣಿಗ ಸ್ಮಾರಕ ಪ್ರಶಸ್ತಿ ಶಿವಶಂಕರ ಭಟ್ ಎಚ್.ಜಿ.ಕೊಪ್ಪ, ಮಾನ್ಯ ತಿಮ್ಮಯ್ಯ ಸ್ಮಾರಕ ಪ್ರಶಸ್ತಿ- ಸುಬ್ರಹ್ಮಣ್ಯ ಗಾಣಿಗ ಸಜಿಪ, ಎಚ್.ಪರಮೇಶ್ವರ ಐತಾಳ್ ಸ್ಮಾರಕ ಪ್ರಸಸ್ತಿ- ಶ್ಯಾಮ ನಾಯ್ಕ್ ಚೇರ್ಕಾಡಿ.
ಕಡಂದೇಲು ಪುರುಷೋತ್ತಮ ಭಟ್ ಸ್ಮಾರಕ ಪ್ರಶಸ್ತಿ- ಆನೆಕಲ್ಲು ಗಣಪತಿ ಭಟ್, ಕಡತೋಕಾ ಕೃಷ್ಣ ಭಾಗವತ ಸ್ಮಾರಕ ಪ್ರಶಸ್ತಿ- ಕೆರೆಮನೆ ಶಿವಾನಂದ ಹೆಗಡೆ, ಬಿ.ಪಿ.ಕರ್ಕೇರಾ ಸ್ಮಾರಕ ಪ್ರಶಸ್ತಿ- ಬಾಲಕೃಷ್ಣ ಶೆಟ್ಟಿ ತಾರಿಯಡ್ಕ, ಕೆ.ಮನೋಹರ ಸ್ಮಾರಕ ಪ್ರಶಸ್ತಿ- ಸಂಜುಕುಲಾಲ, ಆರ್.ಕೆ.ರಮೇಶ ರಾವ್ ಸ್ಮಾರಕ ಪ್ರಶಸ್ತಿ- ಶ್ರೀರಾಮ ಭಟ್ ಸಬ್ಬಣಕೋಡಿ, ಕೆ.ಗೋವಿಂದ ಭಟ್ ಸ್ಮಾರಕ ಪ್ರಶಸ್ತಿ- ದಿವಾಣ ಶಿವಶಂಕರ್ ಭಟ್, ಕೂಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ಪ್ರಶಸ್ತಿ ಕೆದಿಲ ಜಯರಾಮ ಭಟ್, ಪ್ರಭಾವತಿ ವಿ.ಶೆಣೈ ಮತ್ತು ಯು ವಿಶ್ವನಾಥ ಶೆಣೈ ಗೌರವಾರ್ಥ ಪ್ರಶಸ್ತಿ- ಪ್ರಭಾಕರ ಆಚಾರ್ಯ ಇಂದ್ರಾಳಿ.






