ಗೋಡಂಬಿ ರಫ್ತು ಮಾಡದೆ 17ಲಕ್ಷ ರೂ. ವಂಚನೆ ಆರೋಪ: ಪ್ರಕರಣ ದಾಖಲು

ಕಾರ್ಕಳ, ಜೂ.5: ಕರಾರಿನಂತೆ ಗೋಡಂಬಿ ರಫ್ತು ಮಾಡದೆ ಸಿಂಗಾಪುರದ ವ್ಯಕ್ತಿಯೊಬ್ಬ ನಿಟ್ಟೆಯ ಉದ್ಯಮಿಗೆ ಲಕ್ಷಾಂತರ ರೂ. ವಂಚನೆ ಎಸಗಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಂಗಾಪುರದ ಕಂಪೆನಿಯೊಂದರ ಮಾಲಕ ಬಿಪಿನ್ ಜಾ ಎಂಬಾತನೊಂದಿಗೆ ಗೇರು ಬೀಜ ರಪ್ತು ಮಾಡುವ ಉದ್ದಿಮೆ ಮಾಡಿಕೊಂಡಿದ್ದ ನಿಟ್ಟೆಯ ಬಿ.ಶ್ರೀನಿವಾಸ ಎಂಬವರು 2023ರ ಜೂ.21ರಂದು ಕಚ್ಚಾ ಗೋಡಂಬಿ ಖರೀದಿ ಮಾಡುವ ಬಗ್ಗೆ ಕರಾರು ಪತ್ರ ಮಾಡಿಕೊಂಡಿದ್ದರು. ಅದರಂತೆ ಶ್ರೀನಿವಾಸ್ ತನ್ನ ಖಾತೆಯಿಂದ 17,08,938ರೂ.ವನ್ನು ಬಿಪಿನ್ ಜಾನ ಖಾತೆಗೆ ವರ್ಗಾವಣೆ ಮಾಡಿದ್ದರು.
ಆದರೆ ಬಿಪಿನ್ ಜಾ ಕೇರಳದ ನಿವಾಸಿ ಸುರೇಶ್ ಎಂಬಾತನ ಜೊತೆ ಸೇರಿಕೊಂಡು ಕರಾರಿನಲ್ಲಿ ಮಾಡಿ ಕೊಂಡ ಒಪ್ಪಂದಂತೆ ಶ್ರೀನಿವಾಸ್ ಅವರಿಗೆ ಕಚ್ಚಾ ಗೋಡಂಬಿಯನ್ನು ರಫ್ತು ಮಾಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story





