ಉಡುಪಿ| ಹೂಡಿಕೆ ಹೆಸರಿನಲ್ಲಿ 17 ಲಕ್ಷ ರೂ. ಆನ್‌ಲೈನ್ ವಂಚನೆ; ಪ್ರಕರಣ ದಾಖಲು

ಉಡುಪಿ, ಸೆ.28: ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ಆನ್‌ಲೈನ್ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಂತ್ ಕುಮಾರ್(27) ಎಂಬವರಿಗೆ 2025 ಜುಲೈ ತಿಂಗಳಿನಲ್ಲಿ ಅಪರಿಚಿತ ನಂಬರಿನಿಂದ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭಾಂಶ ಬರುವ ಸಂದೇಶ ಬಂದಿದ್ದು, ಇವರನ್ನು ವಾಟ್ಸಾಪ್ ಗ್ರೂಪಿಗೆ ಸೇರ್ಪಡೆಗೊಳಿಸ ಲಾಗಿತ್ತು. ಆ ಗ್ರೂಪಿನಲ್ಲಿ ಜು.3ರಂದು ಅಂಜಲಿ ಮೆಹ್ತಾ ಹಾಗೂ ಶ್ರೀಧರ್ ರಂಗರಾಜನ್ ಎಂಬವರ ಪರಿಚಯವಾಗಿದ್ದು, ಇವರು ವಿಶೇಷ ಆಫರ್ ನೀಡುವುದಾಗಿ ಹೇಳಿ, ಸುಮಂತ್ ಕುಮಾರ್‌ನಿಂದ ಒಟ್ಟು 16,99,605 ಹಣವನ್ನು ಆನ್‌ಲೈನ್ ಮೂಲಕ ಪಡೆದು ವಂಚಿಸಿರುವುದಾಗಿ ದೂರಲಾಗಿದೆ.
Next Story





