ಬೈಂದೂರು: ರೈತರ ಧರಣಿ 17ನೇ ದಿನಕ್ಕೆ; ಮೀನುಗಾರಿಕಾ ಸಚಿವ ಎಸ್.ಮಂಕಾಳ ವೈದ್ಯ ಭೇಟಿ

ಬೈಂದೂರು, ಅ.8: ರೈತ ಸಂಘ ಬೈಂದೂರು ಇದರ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ನಡೆಯುತ್ತಿ ರುವ ರೈತರ ಹಾಗೂ ಗ್ರಾಮಸ್ಥರ ಅನಿರ್ಧಿಷ್ಟಾವಧಿ ಧರಣಿ 17ನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾ ರಾಜ್ಯ ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್.ಮಂಕಾಳ ವೈದ್ಯ ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ರೈತರನ್ನು ಭೇಟಿ ಮಾಡಿದರು.
ಬಳಿಕ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಈ ಕುರಿತು ತನಗೆ ತಿಳಿಸಿದ್ದು, ರೈತರ ಹೋರಾಟ ನ್ಯಾಯ ಸಮ್ಮತವಾಗಿದೆ. ಜಿಲ್ಲಾಧಿಕಾರಿಗಳು ಕಳಿಸಿರುವ ವರದಿಯನ್ನು ಆಧರಿಸಿ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿ ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ರಾಜ್ಯದ ಮುಖ್ಯಮಂತ್ರಿಗಳು ರೈತರ ಪರ ಇರುವು ದರಿಂದ ಖಂಡಿತ ನ್ಯಾಯ ದೊರಕುತ್ತದೆ ಎಂದರು ಮತ್ತು ಧರಣಿಯನ್ನು ಕೈಬಿಡಲು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ರೈತರು ನಮ್ಮ ಧರಣಿಗೆ ನ್ಯಾಯಪರ ಆಗ್ರಹ ಬಿಟ್ಟರೆ ಇತರ ಯಾವುದೇ ಉದ್ದೇಶಗಳಿಲ್ಲ. ಹೀಗಾಗಿ ಸಚಿವಾಲಯ, ಸರಕಾರ ಹಾಗೂ ಜಿಲ್ಲಾಡಳಿತದಿಂದ ಲಿಖಿತ ಉತ್ತರ ದೊರಕಿದರೆ ಧರಣಿ ಕೈಬಿಡಲು ಸಿದ್ದರಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ, ಶಿರೂರು ರೈತ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ, ಹರೀಶ್ ತೋಳಾರ್, ರಘುರಾಮ ಕೆ.ಪೂಜಾರಿ, ಸುಭಾಷ ಗಂಗನಾಡು, ಮ್ಯಾಥ್ಯೂ ಕೆ.ಎಸ್, ರವೀಂದ್ರ ಶೆಟ್ಟಿ ಪಟೇಲ್, ಹೆರಿಯ ಪೂಜಾರಿ, ಚಿಕ್ಕು ಪೂಜಾರಿ, ಪದ್ಮಾಕ್ಷ ಗೋಳಿಬೇರು, ಕೃಷ್ಣ ದೇವಾಡಿಗ, ಸುಧೀರ್ ಪೂಜಾರಿ, ದೊಟ್ಟಯ್ಯ ಪೂಜಾರಿ, ವೆಂಕಟ ಪೂಜಾರಿ ಶಿರೂರು ಮೊದಲಾದವರು ಹಾಜರಿದ್ದರು.
ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೀರಭದ್ರ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.







