ಉಡುಪಿ, ಜ.16: ನಗರಸಭೆ ಪೌರಕಾರ್ಮಿಕರಿಗೆ ಜನವರಿ 18ರಂದು ಪರ್ಯಾಯ ಕೆಲಸ ಕಾರ್ಯಗಳು ಇರುವುದರ ಹಿನ್ನೆಲೆಯಲ್ಲಿ ಅಂದು ನಗರಸಭಾ ವ್ಯಾಪ್ತಿಯಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಕಸ ವಿಲೇವಾರಿ ಇರುವುದಿಲ್ಲ. ಆದ್ದರಿಂದ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.