ಉಡುಪಿ: ಮಠದಲ್ಲಿ ಅ.19ರಂದು ಗೂಡುದೀಪ ಸ್ಪರ್ಧೆ

ಉಡುಪಿ, ಅ.17: ಪರ್ಯಾಯ ಶ್ರೀಪುತ್ತಿಗೆ ಮಠದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಆಕರ್ಷಕ ಬಣ್ಣಬಣ್ಣದ ಗೂಡುದೀಪ ಸ್ಪರ್ಧೆ ಯನ್ನು ಅ.19ರ ರವಿವಾರ ಅಪರಾಹ್ನ 2:00ರಿಂದ ಸಂಜೆ 5:00 ಗಂಟೆಯವರೆಗೆ ರಾಜಾಂಗಣದ ಮಹಡಿಯ ಮಧ್ವಾಂಗಣದಲ್ಲಿ ಆಯೋಜಿಸಲಾಗಿದೆ.
ಗೂಡುದೀಪ ತಯಾರಿಸಲು ಬೇಕಾದ ಎಲ್ಲಾ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಸಾಂಪ್ರದಾಯಿಕ ಮತ್ತು ಆಧುನಿಕ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಸಾಂಪ್ರದಾಯಿಕ ಗೂಡುದೀಪವನ್ನು ಸ್ಠಳದಲ್ಲೇ ತಯಾರಿಸಬೇಕು. ಆಧುನಿಕ ವಿಭಾಗದಲ್ಲಿ ಗೂಡುದೀಪದ ಅಂದ ಹೆಚ್ಚಿಸಲು ಮಠದ ಸಂಪ್ರದಾಯಕ್ಕೆ ತೊಂದರೆ ಯಾಗದ ಯಾವುದೇ ವಸ್ತುಗಳನ್ನು ಬಳಸಬಹುದು.
ಒಂದು ತಂಡದಲ್ಲಿ ಗರಿಷ್ಟ ಇಬ್ಬರಿಗೆ ಅವಕಾಶ. ಗೂಡುದೀಪ ತಯಾರಿಸಲು ಮೂರು ಗಂಟೆಗಳ ಕಾಲಾವಕಾಶ ನೀಡಲಾಗುವುದು. ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ನೀಡಲಾಗುವುದು. ಸಾಂಪ್ರದಾಯಿಕ ವಿಭಾಗದ ಪ್ರಥಮ ಬಹುಮಾನ 5,000ರೂ., ದ್ವಿತೀಯ ಬಹುಮಾನ 3,000 ಹಾಗೂ ತೃತೀಯ ಬಹುಮಾನ 2,000ರೂ.
ಆಧುನಿಕ ವಿಭಾಗದಲ್ಲಿ ಪ್ರಥಮ ಬಹುಮಾನ 8,000ರೂ., ದ್ವಿತೀಯ ಬಹುಮಾನ 5,000ರೂ., ತೃತೀಯ ಬಹುಮಾನ 3,000ರೂ. ಭಾಗವಹಿಸಿದ ಪ್ರತೀ ತಂಡಕ್ಕೆ ಪ್ರೋತ್ಸಾಹಧನ ನೀಡಲಾಗುವುದು. ಸ್ಪರ್ಧೆಗೆ ನೋಂದಾಯಿಸಲು ಕೇಶವ ಆಚಾರ್ (9632287917), ಕೆ.ರವೀಂದ್ರ ಆಚಾರ್ (9449390418), ಜಿ.ವಿ. ಆಚಾರ್ (7829100081) ಅಥವಾ ರಾಘವೇಂದ್ರ ಭಟ್ (9448952964) ಇವರನ್ನು ಸಂಪರ್ಕಿಸಬಹುದು ಎಂದು ಪರ್ಯಾಯ ಪುತ್ತಿಗೆ ಮಠದ ಪ್ರಕಟಣೆ ತಿಳಿಸಿದೆ.







