ಉಡುಪಿ: 195 ಅಭ್ಯರ್ಥಿಗಳಿಗೆ ನಾಗರೀಕ ಬಂದೂಕು ತರಬೇತಿ

ಉಡುಪಿ, ಸೆ.15: ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕೇಂದ್ರ ಸ್ಥಾನದಲ್ಲಿ ಉಡುಪಿ ಜಿಲ್ಲಾ ನಾಗರೀಕ ಬಂದೂಕು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರವನ್ನು ಸೋಮವಾರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಉದ್ಘಾಟಿಸಿ ಬಂದೂಕು ತರಬೇತಿಯ ಬಗ್ಗೆ ಮಾಹಿತಿ ನೀಡಿದರು. 5 ದಿನಗಳ ಅವಧಿಯಲ್ಲಿ ನಡೆಯುವ ಈ ತರಬೇತಿಗೆ ಒಟ್ಟು 195 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಉಡುಪಿ ಉಪ ವಿಭಾಗದಿಂದ 59, ಕಾರ್ಕಳ ಉಪ ವಿಭಾಗದಿಂದ 55 ಮತ್ತು ಕುಂದಾಪುರ ಉಪವಿಭಾಗದಿಂದ 81 ಅಭ್ಯರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಲಿದ್ದಾರೆ.
ಉಡುಪಿಯಲ್ಲಿ ಉಡುಪಿ ಉಪವಿಭಾಗದ ತರಬೇತಿ, ಕಾರ್ಕಳ ಉಪ ವಿಭಾಗದ ತರಬೇತಿ ಹೆಬ್ರಿಯಲ್ಲಿ ಮತ್ತು ಕುಂದಾಫುರ ಉಪ ವಿಭಾಗದ ತರಬೇತಿ ಕುಂದಾಪುರದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಉಪಾಧೀಕ್ಷಕ ತಿಮ್ಮಪ್ಪ ಗೌಡ ಮತ್ತು ಸಶಸ್ತ್ರ ಮೀಸಲು ಆರಕ್ಷಕ ನಿರೀಕ್ಷಕ ರವಿ ಕುಮಾರ್ ಉಪಸ್ಥಿತರಿದ್ದರು.
Next Story





