ಉಡುಪಿ ಹೆಚ್ಚುವರಿ ಎಸ್ಪಿ-2 ಆಗಿ ಪರಮೇಶ್ವರ ಹೆಗ್ಡೆ ನೇಮಕ

ಪರಮೇಶ್ವರ ಹೆಗ್ಡೆ
ಉಡುಪಿ, ನ.30: ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ-2 ಆಗಿ ಪರಮೇಶ್ವರ ಅನಂತ್ ಹೆಗ್ಡೆ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಇಬ್ಬರು ಹೆಚ್ಚುವರಿ ಎಸ್ಪಿಗಳು ಕಾರ್ಯನಿರ್ವಹಿಸಲಿದ್ದಾರೆ.
ಪರಮೇಶ್ವರ್ ಹೆಗ್ಡೆ ಈ ಹಿಂದೆ ಮಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ)ದ ಡಿವೈಎಸ್ಪಿಯಾಗಿದ್ದರು. 1994ರಲ್ಲಿ ಎಸ್ಸೈ ಆಗಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಇವರು, 2004ರಿಂದ 2006ರವರೆಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ, 2015ರಲ್ಲಿ ಸಿಸಿಬಿಯಲ್ಲಿ ನಿಯೋಜನೆ ಮತ್ತು ವಿಜಯ ನಗರ ಉಪವಿಭಾಗದ ಡ್ಯೂಟಿ ಎಸಿಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು.
Next Story





