ನಿರ್ಲಕ್ಷ್ಯದಿಂದ ವರ್ಷಕ್ಕೆ 2ಲಕ್ಷ ಅಪಘಾತ: ಸಂತೋಷ್ ಶೆಟ್ಟಿ

ಕುಂದಾಪುರ, ಫೆ.5: ಇಂದು ಮಾನವನ ನಿರ್ಲಕ್ಷದಿಂದಾಗಿಯೇ ಭಾರತದಲ್ಲಿ ವರ್ಷವೊಂದಕ್ಕೆ ಸರಿಸುಮಾರು 1.5 ಲಕ್ಷದಿಂದ 2ಲಕ್ಷದ ತನಕ ರಸ್ತೆ ಅಪಘಾತ ಸಂಭವಿಸುತ್ತವೆ. ಅದರಲ್ಲಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಗಮನಿಸಿದರೆ ರಸ್ತೆ ಅಪಘಾತ ಗಳ ಭೀಕರತೆ ಅರ್ಥವಾಗುತ್ತದೆ. ಚಾಲನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ರಸ್ತೆ ದುರಂತಗಳಿಂದ ಪಾರಾಗಬಹುದು ಎಂದು ಉಡುಪಿ ಪ್ರಾದೇಶಿಕ ರಸ್ತೆ ಸಾರಿಗೆ ಅಧಿಕಾರಿ ಸಂತೋಷ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ವತಿಯಿಂದ ವಾಹನ ಕುಂದಾಪುರ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಚಾಲಕ, ಮಾಲಿಕರಿಗಾಗಿ ಆಯೋಜಿಸಲಾದ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚಾರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಸ್ತೆ ನಿಯಮಗಳನ್ನು ಪಾಲಿಸಿ ಆವಘಡ, ದುರಂತ ಗಳಿಂದ ಪಾರಾಗುವಂತೆ ಅವರು ಕರೆ ನೀಡಿದರು. ವೇದಿಕೆಯಲ್ಲಿ ಹೊಸಂಗಡಿ ಕರ್ನಾಟಕ ಪವರ್ ಕಾಪೋರೇಷನ್ ಘಟಕದ ಅಧಿಕಾರಿ ಕೃಷ್ಣ ಮೂರ್ತಿ ಉಪಸ್ಥಿತರಿದ್ದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.