ತಲೆಮರೆಸಿಕೊಂಡಿದ್ದ ಆರೋಪಿಗೆ 2 ವರ್ಷ ಕಾರಾಗೃಹ ಶಿಕ್ಷೆ

ಕುಂದಾಪುರ, ಮಾ.25: ಕುಂದಾಪುರ ಠಾಣಾ ಪ್ರಕರಣವೊಂಗದರಲ್ಲಿ ಆರೋಪಿಯಾಗಿದ್ದ ಸಿದ್ಧಾಪುರ ಗ್ರಾಮದ ಅಕ್ಕುಂಜೆ ಶಶಿಕಾಂತ ಶೆಟ್ಟಿ ಎಂಬಾತನು ಪ್ರಕರಣದಲ್ಲಿ ದಸ್ತಗಿರಿಯಾಗದೇ 2015ರಿಂದ ತಲೆಮರೆಸಿಕೊಂಡಿದ್ದು, 2024ರಲ್ಲಿ ಹೊರಡಿಸಿದ ವಾರಂಟ್‌ನಂತೆ ಆರೋಪಿ ಯನ್ನು ಪಶ್ವಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ದಸ್ತಗಿರಿ ಮಾಡಿ ಕಳೆದ ಮಾ.1ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಇದೀಗ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ಮಾ.24ರಂದು ಶಶಿಕಾಂತ ಶೆಟ್ಟಿಗೆ 2 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿ ಅಂತಿಮ ಆದೇಶವನ್ನು ಹೊರಡಿಸಿದೆ ಎಂದು ಕುಂದಾಪುರ ಪೊಲೀಸರು ತಿಳಿಸಿದ್ದಾರೆ.
Next Story





